ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಂಟು ಕಾಲು, ಎರಡು ಸೊಂಟವಿರುವ ಮೇಕೆ ಜನನ: ಅಚ್ಚರಿಗೊಂಡ ಜನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಎಂಟು ಕಾಲು ಹಾಗೂ ಎರಡು ಸೊಂಟವಿರುವ ವಿಚಿತ್ರ ಮೇಕೆ ಮರಿಯೊಂದು ಜನನವಾಗಿರುವ ಘಟನೆ ಪಶ್ಚಿಮ ಬಂಗಾಳದ ಬಂಗಾಂವ್ ನ ಕಲ್ಮೆಘಾ ಪ್ರದೇಶದಲ್ಲಿ ನಡೆದಿದೆ.

ಸರಸ್ವತಿ ಮೊಂಡಲ್ ಎಂಬಾಕೆಯ ಮನೆಯಲ್ಲಿ ಈ ವಿಚಿತ್ರ ಮೇಕೆ ಮರಿ ಜನನವಾಗಿದೆ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ವಿಚಿತ್ರ ಮೇಕೆ ಮರಿ ನೋಡಲು ಸಾಗರೋಪಾದಿಯಲ್ಲಿ ಜನರು ಆಗಮಿಸಿದ್ದಾರೆ.

ಎರಡು ಮರಿಗಳಿಗೆ ತಾಯಿ ಮೇಕೆ ಜನ್ಮ ನೀಡಿತ್ತು. ಒಂದು ಮರಿ ಸಾಮಾನ್ಯವಾಗಿದ್ದು, ಇನ್ನೊಂದು ಮರಿ ಎಂಟು ಕಾಲು ಹಾಗೂ ಎರಡು ಸೊಂಟವನ್ನು ಹೊಂದಿತ್ತು. ಈ ವಿಚಿತ್ರ ಮರಿ ಹುಟ್ಟಿದ 5 ನಿಮಿಷದಲ್ಲಿ ಮೃತಪಟ್ಟಿದೆ.

‘ಈ ರೀತಿಯ ವಿಚಿತ್ರ ಮೇಕೆ ಮರಿ ನೋಡಿರುವುದು ಇದೇ ಮೊದಲ ಬಾರಿಗೆ. ಹುಟ್ಟಿ 5 ನಿಮಿಷದಲ್ಲಿಯೇ ಅದು ಸತ್ತು ಹೋಯಿತು. ಇನ್ನೊಂದು ಮರಿ ಆರೋಗ್ಯವಾಗಿದೆ’ ಎಂದು ಸರಸ್ವತಿ ಮೊಂಡಾಲ್ ಹೇಳಿದ್ದಾರೆ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss