Sunday, June 26, 2022

Latest Posts

ಕರ್ನಾಟಕ ಹಾಕಿ ತಂಡಕ್ಕೆ ಕೊಡಗಿನ ಎಂಟು ಬಾಲಕಿಯರು ಆಯ್ಕೆ

ಹೊಸದಿಗಂತ ವರದಿ, ಕೊಡಗು:

ಜಾರ್ಖಂಡ್‌ನಲ್ಲಿ ಅ.20ರಿಂದ ನಡೆಯಲಿರುವ ಬಾಲಕಿಯರ ಜ್ಯೂನಿಯರ್ ನ್ಯಾಷನಲ್ಸ್ ಹಾಕಿ ಪಂದ್ಯಾವಳಿಯಲ್ಲಿ  ಕೊಡಗಿನ ಎಂಟು ಮಂದಿ ವಿದ್ಯಾರ್ಥಿನಿಯರು ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಪಾಂಡಂಡ ದೇಚಮ್ಮ,  ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರಾದ ಬಾದುಮಂಡ ಶಯಾ ಕಾವೇರಮ್ಮ, ಹೆಚ್.ಪಿ ಸಿಂಚನಾ, ಬಿ.ಕೆ‌‌ ಲೀಲಾವತಿ, ದ್ವೀತಿಯ ಬಿ.ಎ ವಿದ್ಯಾರ್ಥಿನಿಯರಾದ ಪೊನ್ನಿಮಾಡ ಶಿಲ್ಪಾ, ಹೆಚ್.ಪಿ.ಧನುಶ್ರೀ, ತೃತಿಯ ಬಿಕಾಂ.ನ ಕೆಚ್ಚೆಟ್ಟಿರ ಪಾರ್ವತಿ, ತೃತಿಯ ಬಿ.ಎ. ವಿದ್ಯಾರ್ಥಿನಿ ಎಸ್.ಪಿ ಲಿಖಿತಾ ರಾಜ್ಯ ಜ್ಯೂನಿಯರ್ ಹಾಕಿ ತಂಡಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರಾಗಿದ್ದಾರೆ. ಇವರೆಲ್ಲರೂ ಸಾಯಿ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆದಿದ್ದು, ಈ ಹಿಂದೆ ಹತ್ತಕ್ಕೂ ಹೆಚ್ಚಿನ ರಾಷ್ಟ್ರೀಯ ಮಟ್ಟದ‌ ಹಾಕಿ ಕ್ರೀಡಾಕೂಟಗಳಲ್ಲಿ, ಭಾರತದ ಹಲವೆಡೆ ಆಡಿ ಅನುಭವ ಹೊಂದಿದ್ದಾರೆ. ಇದೀಗ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ  ಪಂದ್ಯಾವಳಿಗೆ  ಸಿದ್ಧತೆ ನಡೆಸುತ್ತಿದ್ದು,  ಹಾಕಿ ತವರೂರು ಕೊಡಗಿನಿಂದ ಎಂಟು ಮಂದಿ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವುದು ಜಿಲ್ಲಾ ಕ್ರೀಡಾ ಪ್ರೇಮಿಗಳಲ್ಲಿ ಹರ್ಷ ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss