ಮುಸ್ಲಿಂ ಕುಟುಂಬದ 8 ಮಂದಿ ಹಿಂದು ಧರ್ಮಕ್ಕೆ ‘ಘರ್​ ವಾಪಸಿ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಪ್ರದೇಶದ ಮುಜಾಫರ್​ನಗರ ಜಿಲ್ಲೆಯ ಮೀರತ್​ನಲ್ಲಿ ಎರಡು ಮುಸ್ಲಿಂ ಕುಟುಂಬಗಳ ಎಂಟು ಜನರು ತಾವೇ ಸ್ವತಃ ಒಪ್ಪಿಕೊಂಡು ಹಿಂದು ಧರ್ಮವನ್ನು ಶಾಸ್ತ್ರೋಕ್ತವಾಗಿ ಸ್ವೀಕರಿಸಿದ್ದಾರೆ.
ಬಾಘ್ರಾದ ಯಶ್ವೀರ್​ ಆಶ್ರಮದಲ್ಲಿ ನಡೆದ ಶುದ್ಧಿ ಯಜ್ಞದಲ್ಲಿ ಪಾಲ್ಗೊಂಡ ಮುಸ್ಲಿಂ ಕುಟುಂಬದವರಿಗೆ ಹಿಂದು ಧರ್ಮದ ಮರು ದೀಕ್ಷೆ ನೀಡಲಾಗಿದೆ. ಆಚಾರ್ಯ ಮೃಗೇಂದ್ರ ಬ್ರಹ್ಮಚಾರಿ ಅವರು ವೇದ ಮಂತ್ರಗಳನ್ನು ಪಠಿಸಿ ಘರ್​ ವಾಪಸಿ ಮಾಡಿಕೊಂಡರು.
ಆಶ್ರಮದ ಮಹಂತ್ ಸ್ವಾಮಿ ಯಶ್ವೀರ್ ಮಹಾರಾಜ್ ಮಾತನಾಡಿ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಿಂದುಗಳನ್ನು ಅನ್ಯಮತಕ್ಕೆ ಮತಾಂತರ ಮಾಡಿದ್ದರು. ಕೆಲವು ಮೌಲಾನಾ, ಮೌಲ್ವಿಗಳು ಹಿಂದು ಧರ್ಮದ ಬಡ ಜನರಿಗೆ ಆಮಿಷ ಒಡ್ಡಿ ಮತ್ತು ಅಥವಾ ಇತರೆ ಮಾರ್ಗಗಳಿಂದ ಮುಸ್ಲಿಮರನ್ನಾಗಿ ಪರಿವರ್ತಿಸಿದ್ದಾರೆ. ಇದೀಗ ಅಂದು ಮತಾಂತರಗೊಂಡ ಜನರಲ್ಲಿ ಜಾಗೃತಿ ಮೂಡಿದೆ. ಇದರ ಫಲವಾಗಿ ಹಿಂದು ಧರ್ಮಕ್ಕೆ ವಾಪಸ್​ ಆಗುತ್ತಿದ್ದಾರೆ ಎಂದು ಹೇಳಿದರು.
ಇಂದು ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ 2 ಕುಟುಂಬದ 8 ಮಂದಿ ಶುದ್ಧಿ ಯಾಗದಲ್ಲಿ ಭಾಗವಹಿಸಿ, ಗಾಯತ್ರಿ ಮಂತ್ರವನ್ನು ಪಠಿಸುವ ಮೂಲಕ ಮತ್ತೆ ಹಿಂದು ಧರ್ಮವನ್ನು ಸೇರಿಕೊಂಡಿದ್ದಾರೆ ಎಂದು ತಿಳಿಸಿದರು.
ಹಿಂದು ಧರ್ಮಕ್ಕೆ ವಾಪಸ್ಸಾದ 8 ಮಂದಿಯು ಮುಸ್ಲಿಂ ಹೆಸರನ್ನು ತೊರೆದು ಹಿಂದು ಧರ್ಮದ ಹೆಸರುಗಳನ್ನು ಪಡೆದುಕೊಂಡಿದ್ದಾರೆ. ಶಾಹಿಸ್ತಾ ಎಂಬ ಮಹಿಳೆಗೆ ರಾಧಾ ಎಂದು ಮರು ನಾಮಕರಣ ಮಾಡಿದರೆ, ಬರ್ಖಾ ಎಂಬಾಕೆಗೆ ವರ್ಷ, ರಶೀದಾಗೆ ಗೀತಾ, ಅಕ್ಬರ್ ಹೆಸರಿನ ವ್ಯಕ್ತಿಗೆ ಕೃತಪಾಲ್, ಇಕ್ರಾ ಬದಲಾಗಿ ಶೀತಲ್, ಗುಲ್ಲು ಎಂಬಾತನಿಗೆ ಕಾರ್ತಿಕ್‌, ಎಹ್ಸಾನ್‌ಗೆ ಸಚಿನ್ ಮತ್ತು ಹರೂನ್‌ಗೆ ಅರುಣ್ ಎಂದು ಹೆಸರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!