Thursday, August 11, 2022

Latest Posts

ಮೂರು ಪ್ರತ್ಯೇಕ ಸ್ಥಳದಲ್ಲಿ ಬಂದೂಕುಧಾರಿಗಳ ದಾಳಿ: 8 ಮಂದಿ ಸಾವು

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ.

ಈಶಾನ್ಯ ಅಟ್ಲಾಂಟಾದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಚೆರೋಕೀ ಕೌಂಟಿ ಪಾರ್ಲರ್ ನಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥ ರೋಡ್ನಿ ಬ್ರ್ಯಾಂಟ್, ಸಂಜೆ 5ಗಂಟೆ ವೇಳೆಗೆ ಚೆರೋಕೀ ಕೌಂಟಿ ಪಾರ್ಲರ್ ನ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಬಳಿಕ ಗೋಲ್ಡ್ ಸ್ಪಾದಲ್ಲಿ ಎರಡು ದಾಳಿ ನಡೆದಿದ್ದು, ನಾಲ್ಕು ಮಂದಿ ಬಲಿಯಾಗಿದ್ದಾರೆ. ದಾಳಿ ನಡೆಸಿದ ಶಂಕಿತ ಬಂದೂಕುಧಾರಿ ರಾಬರ್ಟ್ ಆರನ್ ಲಾಂಗ್ ನನ್ನು ಬಂಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss