ಚೀನಾದ 80 ಶೇಕಡಾ ಜನಸಂಖ್ಯೆಯನ್ನು ಬಾಧಿಸಿದೆ ಕೋವಿಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶೂನ್ಯ ಕೋವಿಡ್‌ ನೀತಿಗಳನ್ನು ತೆಗೆದುಹಾಕಿರುವುದರ ಪರಿಣಾಮ ಚೀನಾದಲ್ಲಿ ಕೋವಿಡ್‌ ಉಲ್ಬಣಿಸಿದ್ದು ಚೀನಾದ 1.4 ಬಿಲಿಯನ್‌ ಜನಸಂಖ್ಯೆಯಲ್ಲಿ 80 ಶೇಕಡಾದಷ್ಟು ಜನರು ಕೋವಿಡ್‌ ನಿಂದ ಬಾಧಿತರಾಗಿದ್ದಾರೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗ ಪಡಿಸಿದೆ.

ಚೀನಾವು ಕೋವಿಡ್‌ನಿಂದ ತತ್ತರಿಸಿದ್ದು ಚೀನಾದ ಜ್ವರದ ಆಸ್ಪತ್ರೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಾಖಲಾಗುತ್ತಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಚೀನಾದಲ್ಲಿ ಕೋವಿಡ್‌ ಸ್ಪೋಟಗೊಂಡ ನಂತರ ಜನವರಿ ಸಮಯದಲ್ಲಿ ಚೀನಾವು ಕೋವಿಡ್‌ ಉಲ್ಬಣದ ಉತ್ತುಂಗದಲ್ಲಿರುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಈ ವಿಶ್ಲೇಷಣೆಗಳು ಬಹುತೇಕ ಸತ್ಯವಾಗಿದ್ದು 80 ಶೇಕಡಾದಷ್ಟು ಜನಸಂಖ್ಯೆ ಬಾಧಿತವಾಗಿದೆ ಎಂದು ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ನ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನ್ಯೂ ವೈಬೋ ಹೇಳಿದ್ದಾರೆ.

ಪ್ರಸ್ತುತ 80 ಶೇಕಡಾದಷ್ಟು ಜನ ಸಂಖ್ಯೆ ಕೋವಿಡ್‌ ನಿಂದ ಬಾಧಿತವಾಗಿರುವುದರಿಂದ ಮತ್ತೊಮ್ಮೆ ಸಾಂಕ್ರಾಮಿಕವು ಉಲ್ಬಣಗೊಳ್ಳುವ ಸಾಧ್ಯತೆ ದೂರವಿದೆ ಎಂದಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ಉಲ್ಬಣದ ಎರಡನೇ ಅಲೆ ಸಂಭವಿಸಬಹುದು ಎಂದು ಈ ಹಿಂದೆ ವರದಿಯಾಗಿತ್ತು. “ಕೋವಿಡ್‌ ನೀತಿಗಳನ್ನು ತೆಗೆದು ಹಾಕಿರುವುದರಿಂದ ಜನರ ಓಡಾಟವು ಹೆಚ್ಚಾಗಿದೆ. ಜನರೆಲ್ಲ ರಜೆಯ ಸಮಯವನ್ನು ಕಳೆಯಲು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ಸೋಂಕಿನ ಸಂಖ್ಯೆ ಅಲ್ಲಲ್ಲಿ ಹೆಚ್ಚಬಹುದು. ಆದರೆ ಎರಡನೇ ತರಂಗವು ಅಸಂಭವವಾಗಿದೆ” ಎಂದು ಎಂದು ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ನ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜುನ್ಯೂ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!