Tuesday, July 5, 2022

Latest Posts

82 ಲಕ್ಷ ರೂ. ನಗದು ಹಣ ಅಕ್ರಮ ಸಾಗಾಟ: ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಹುಬ್ಬಳ್ಳಿ:

ಅಕ್ರಮವಾಗಿ ಸಾಗಿಸುತ್ತಿದ್ದ 82 ಲಕ್ಷ ರೂ. ನಗದು ಹಣವನ್ನು ಕೇಶ್ವಾಪೂರ ಠಾಣಾ ಪೊಲೀಸರು ವಶಪಡಿಸಿಕೊಂಡು ಚಾಲಕನನ್ನು
ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕೇಶ್ವಾಪೂರ ಪೊಲೀಸ್‌ ಅಧಿಕಾರಿ ಜಗದೀಶ ಹಂಚಿನಾಳ ನೇತೃತ್ವರ ತಂಡ ತಡರಾತ್ರಿ 5 ಗಂಟೆಗೆ ಕುಸುಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜು ಹತ್ತಿರ ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಶಿಫ್ಟ್ ಡಿಸೈರ್ ಕಾರಿನಲ್ಲಿ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ. ತಪಾಸಣೆ ವೇಳೆ 82,72,500 ನಗದು ದೊರೆತಿದೆ. ಹಣಕ್ಕೆ ಸಂಬಂಧಿಸಿ ಚಾಲಕ ಗೋಕುಲರಾಮನನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ, ದಾಖಲೆಗಳನ್ನು ನೀಡಿಲ್ಲ. ರಾಜಸ್ಥಾನ ಮೂಲದ ಹಾಲಿ ಬಾಗಲಕೋಟೆಯ ಟಾಂಗಾ ನಿಲ್ದಾಣದ ಭವಾನಿ ಟೀ ಸ್ಟಾಲ್ ಸನಿಹದ ನಿವಾಸಿ ಗೋಕುಲರಾಮ ರಬಾರಿ ಬಂಧಿತ ವ್ಯಕ್ತಿ. ಈ ಹಿನ್ನೆಲೆಯಲ್ಲಿ ಪೊಲೀಸರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss