ಕೊನೆಯುಸಿರಲ್ಲೂ ಹಕ್ಕು ಚಲಾಯಿಸಿದ 82ರ ವೃದ್ಧೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ವಿಧಾನಸಭೆ ಚುನಾವಣೆಗೆ ಮನೆಯಿಂದಲೇ ಮತದಾನ ಮಾಡಿದ ‌ಕೆಲವೇ ಗಂಟೆಯಲ್ಲಿ ವೃದ್ಧೆಯೊಬ್ಬರು ನಿಧನರಾದ ಘಟನೆ ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ನಡೆದಿದೆ.

ಮೃತರು ಅಲಬನೂರು ಗ್ರಾಮದ ಮಂಗಮ್ಮ (82) ಆಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಈ ಬಾರಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದ್ದು, ಅದರಂತೆ ಮೇ 3ರಂದು ಮಂಗಮ್ಮ ಅವರ ಮನೆಗೆ ಚುನಾವಣಾ ಸಿಬ್ಬಂದಿ ತೆರಳಿದ್ದರು. ಮಧ್ಯಾಹ್ನ ಸುಮಾರು 12.19ರ ವೇಳೆಗೆ ಮಂಗಮ್ಮ ಮತದಾನ ಮಾಡಿದ್ದರು. ಬಳಿಕ ಮಧ್ಯಾಹ್ನ 12.50ಕ್ಕೆ ಮೃತರಾಗಿದ್ದಾರೆ.

ಮಂಗಮ್ಮ ಅವರ ಮನೆಗೆ ಬುಧವಾರ ಪಿಆರ್​ಒ ದಿನೇಶ ಕೆಪಿ ಹಾಗೂ ಎಪಿಆರ್​​ಒ ಬಸಪ್ಪ ಹೆಚ್ ಹಾಗೂ ಇತರ ಸಿಬ್ಬಂದಿ ತೆರಳಿದ್ದರು. 349 ಸಂಖ್ಯೆಯ ಮತಪತ್ರವನ್ನು ಮಂಗಮ್ಮ ಅವರಿಗೆ ನೀಡಲಾಗಿತ್ತು. ಈ ವಿಚಾರವನ್ನು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!