ಹೊಸ ದಿಗಂತ ವರದಿ, ಕೊಪ್ಪಳ:
ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆ ಮತದಾನದ ವೇಳೆಯಲ್ಲಿ ಎರಡು ವಾರ್ಡಿನಲ್ಲಿ ನಾಲ್ಕ ನಾಲ್ಕು ಮತಪತ್ರಗಳೇ ಮಾಯವಾಗಿರುವ ಅಂಶ ಬೆಳಕಿಗೆ ಬಂದಿದೆ.
ಗ್ರಾಮದ ಒಂದನೇ ವಾರ್ಡಿನಲ್ಲಿ 841 ಮತದಾನವಾಗಿದ್ದರೂ ಮತ ಎಣಿಕೆಯ ವೇಳೆಯಲ್ಲಿ 837 ಮತಪತ್ರಗಳು ಮಾತ್ರ ಇವೆ. ಹಾಗಾದರೇ ಉಳಿದ ನಾಲ್ಕು ಮತಪತ್ರಗಳು ಹೋಗಿದ್ದಾದರೂ ಎಲ್ಲಿಗೆ ಇವುಗಳನ್ನು ಕದ್ದವರು ಯಾರು ಎನ್ನುವುದು ಕೆಲವು ಹೊತ್ತು ಗೊಂದಲಕ್ಕೆ ಕಾರಣವಾಯಿತು.
ಈ ನಡುವೆ ಇದೇ ಗ್ರಾಮದ ಮರಿಯಪ್ಪ ಚಿಗರಿ 422 ಮತಗಳನ್ನು ಹಾಗೂ ಹಾಲಮ್ಮ ನಗರ 423 ಮತಗಳನ್ನು ಪಡೆದಿದ್ದು, ಕೇವಲ ಒಂದು ಮತಗಳ ಅಂತರದಿಂದ ಹಾಲಮ್ಮ ಜಯಗಳಿಸಿದ್ದಾಳೆ ಎಂದು ಘೋಷಣೆ ಮಾಡಲಾಗಿದೆ.
ಆದರೆ, ನಾಲ್ಕು ಬ್ಯಾಲೇಟ್ಗಳು ಮಾಯವಾಗಿರುವುದರಿಂದ ಅವುಗಳನ್ನು ಪತ್ತೆ ಮಾಡಿದ ಮೇಲೆಯೇ ಫಲಿತಾಂಶ ಘೋಷಣೆ ಮಾಡಿ ಎಂದು ಮರಿಯಪ್ಪ ಬೆಂಬಲಿಗರು ಹಠ ಹಿಡಿದು ಕುಳಿತ್ತಿದ್ದರು.
ಆದರೆ ಗ್ರಾಮದಲ್ಲಿ ಮತದಾನವಾದ ಬಳಿಕ ಎಜೆಂಟರಿಗೆ ಬರೆದುಕೊಟ್ಟಿರುವ ವೇಳೆಯಲ್ಲಿ 841 ಮತದಾನವಾಗಿದೆ ಎಂದಿದೆ. ಈಗ ಮಾತ್ರ ಕೇವಲ 837 ಬ್ಯಾಲೇಟ್ ಮಾತ್ರ ಇವೆ ಎಂದರೇ ಹೇಗೆ ? ಅದುವೇ ಫಲಿತಾಂಶವನ್ನು ನಿರ್ಧಾರ ಮಾಡುವುದರಿಂದ ಫಲಿತಾಂಶ ಘೋಷಣೆ ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದರು.
ಅದರಂತೆ ಅದೇ ಗ್ರಾಮದ 1ನೇ ವಾರ್ಡಿನಲ್ಲಿ ಕೂಡ 800 ಮತ ಚಲಾವಣೆಯಾಗಿವೆ. ಆದರೆ ಮತ ಎಣಿಕೆಯ ವೇಳೆಯಲ್ಲಿ 796 ಮತಗಳು ಮಾತ್ರ ಇವುದುರ ಮೂಲಕ ಅಚ್ಚರಿ ಮೂಡಿಸಿದವು. ನಂತರ ತಹಶೀಳ್ದಾರ ಜೆ.ಬಿ ಮಜ್ಜಗಿ ಆಗಮಿಸಿ ಮತದಾನವಾಗಿದೆ. ಆದರೆ ಮತ ಮೆಟ್ಟಿಗೆಯನ್ನು ನಿಮ್ಮೆದುರಿಗೆ ಓಪನ್ ಮಾಡಲಾಗುತ್ತಿದೆ. ಈಗಾಗಿ ಮತ ಹಾಕಿದವರು ಮತ ಪೆಟ್ಟಿಗೆಯಲ್ಲಿ ಮತ ಹಾಕದೇ ಇದಕ್ಕೆ ಕಾರಣವಾಗಿದೆ. ಆದರೆ ಪೆಟ್ಟಿಗೆಯಲ್ಲಿ ಎಷ್ಟು ಮತಪತ್ರಗಳು ಇವೆಯೋ ಅಷ್ಟನ್ನು ನಿಮ್ಮೆದುರಿಗೆ ಎಣಿಕೆ ಮಾಡಿ ಫಲಿತಾಂಶ ನೀಡಲಾಗಿದೆ ಎಂದು ಇದ್ಯಾವುದನ್ನು ಲೆಕ್ಕಿಸದೇ ಫಲಿತಾಂಶವನ್ನು ಘೋಷಣೆ ಮಾಡಲಾಯಿತು.