ಹೊಸದಿಲ್ಲಿ: ಹೊಸ ಸಂಸತ್ ಕಟ್ಟಡವನ್ನು 865 ಕೋಟಿ ರೂ.ಗಳ ಬಿಡ್ ಗೆ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಗೆದ್ದುಗೊಂಡಿದೆ .
ಕೇಂದ್ರ ಲೋಕೋಪಯೋಗಿ ಇಲಾಖೆ ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕೆ ಬಿಡ್ ಕರೆದಿದ್ದು, ಬಿಡ್ ನಲ್ಲಿ ಲಾರ್ಸೆನ್ ಮತ್ತು ಟೌಬ್ರೊ ಅವರನ್ನು ಸೋಲಿಸಿ, ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ 861.9 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಸಂಸತ್ತಿನ ಕಟ್ಟಡ ನಿರ್ಮಿಸುವ ಒಪ್ಪಂದವನ್ನ ಪಡೆದುಕೊಂಡಿದೆ.
ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣ ಕಾರ್ಯವನ್ನ ತಾತ್ಕಾಲಿಕವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳಿಸಲು ಯೋಜಿಸಲಾಗಿದ್ದು, ಸರ್ಕಾರಿ ನಾಗರಿಕ ಸಂಸ್ಥೆಯು ಅಂದಾಜು 940 ಕೋಟಿ ವ್ಯಯಿಸಲಿದೆ ಎನ್ನಲಾಗುತ್ತಿದೆ . ಹೊಸ ಕಟ್ಟಡವು ತ್ರಿಕೋನ ವಿನ್ಯಾಸವನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ.