Wednesday, July 6, 2022

Latest Posts

ಅಫಘಾನಿಸ್ತಾನದಿಂದ 87 ಭಾರತೀಯರು ತಾಯ್ನಾಡಿಗೆ: ‘ಭಾರತ್‌ ಮಾತಾ ಕಿ ಜೈ’ ಘೋಷಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ತಾಲಿಬಾನ್ ಹಿಡಿತದಲ್ಲಿ ನಲುಗುತ್ತಿರುವ ಅಫಘಾನಿಸ್ತಾನದ ಕಾಬೂಲ್‌ನಿಂದ 87 ಭಾರತೀಯರು ತಾಯ್ನಾಡಿಗೆ ಸುರಕ್ಷಿತವಾಗಿ ಹಿಂದಿರುಗುತ್ತಿದ್ದು, ಭಾವೋದ್ವೇಗದಿಂದ ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ.

ಏರ್‌ ಇಂಡಿಯಾ 1956 ವಿಮಾನದಲ್ಲಿ 87 ಭಾರತೀಯರು ಮತ್ತು ಇಬ್ಬರು ನೇಪಾಳಿ ಪ್ರಜೆಗಳನ್ನು ತಜಕಿಸ್ತಾನದ ಮೂಲಕ ದೆಹಲಿಗೆ ಮರಳುತ್ತಿದ್ದಾರ. ಇವರೆಲ್ಲ ತಾಯ್ನಾಡಿಗೆ ಸುರಕ್ಷಿತವಾಗಿ ಮರಳುತ್ತಿರುವುದರಿಂದ ಹರ್ಷ ಚಿತ್ತದಿಂದ ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಮೊಳಗಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಟ್ವೀಟ್‌

ಐಎಎಫ್‌ ಏರ್‌ಕ್ರಾಫ್ಟ್‌ ಮೂಲಕ ಕಾಬೂಲ್‌ನಿಂದ ಪ್ರಯಾಣಿಕರನ್ನು ಹೊರ ಒಯ್ಯಲಾಯಿತು. ಹೆಚ್ಚಿನ ಸ್ಥಳಾಂತರ ಕಾರ್ಯ ಮುಂದುವರಿದಿದೆ ಎಂದು ಅರಿಂದಮ್‌ ಬಾಗ್ಚಿ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss