ಶಾಲೆಯಲ್ಲಿ ಇಡ್ಲಿ–ಚಟ್ನಿ ತಿಂದು 89 ವಿದ್ಯಾರ್ಥಿಗಳು ಅಸ್ವಸ್ಥ: ತನಿಖೆಗೆ ಸಿಎಂ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ಪೋಲಾವರಂ ಜಿಲ್ಲೆಯ ದೇವರಪಲ್ಲಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ. ಶಾಲೆಯ ಸುಮಾರು 255 ವಿದ್ಯಾರ್ಥಿಗಳು ಇಡ್ಲಿ–ಚಟ್ನಿ ಉಪಹಾರ ಸೇವಿಸಿದ ನಂತರ 89 ಮಂದಿ ವಾಂತಿ ಮತ್ತು ಹೊಟ್ಟೆನೋವಿನಿಂದ ಬಳಲಿದ್ದಾರೆ. ಸ್ಥಿತಿಯನ್ನು ಗಮನಿಸಿದ ಶಾಲಾ ಸಿಬ್ಬಂದಿ ತಕ್ಷಣ ವೈದ್ಯಕೀಯ ನೆರವು ಒದಗಿಸಿದ್ದು, 18 ಮಂದಿಯನ್ನು ಮರೆದುಮಿಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ 71 ಮಂದಿಯನ್ನು ರಂಪಚೋಡವರಂ ಪ್ರದೇಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ … Continue reading ಶಾಲೆಯಲ್ಲಿ ಇಡ್ಲಿ–ಚಟ್ನಿ ತಿಂದು 89 ವಿದ್ಯಾರ್ಥಿಗಳು ಅಸ್ವಸ್ಥ: ತನಿಖೆಗೆ ಸಿಎಂ ಆದೇಶ