ರಷ್ಯಾ ದಾಳಿಗೆ ನಿರಾಶ್ರಿತರಾದ 4.2ಮಿಲಿಯನ್‌ ಮಕ್ಕಳು, ಫಾಂಟೈನ್‌ ಕಳವಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನಲ್ಲಿರುವ 4.8ಮಿಲಿಯನ್‌ ಮಕ್ಕಳು ನಿರಾಶಿತರಾಗಿದ್ದಾರೆ ಎಂದು ಯುನಿಸೆಫ್‌ನ ತುರ್ತು ಕಾರ್ಯಕ್ರಮಗಳ ನಿರ್ದೇಶಕ ಮ್ಯಾನುಯೆಲ್ ಫಾಂಟೈನ್ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮತ್ತೊಂದೆಡೆ ಮಹಿಳಾ ಮತ್ತು ಮಕ್ಕಳ ಮೇಲೆ ರಷ್ಯಾದ ಮಿಲಿಟರಿ ಹಿಂಸಾಚಾರದಂತಹ ವಿಷಯಗಳ ಕುರಿತು ಚರ್ಚಿಸಲು ವಿಶ್ವಸಂಸ್ಥೆ ಹಿರಿಯ ಅಧಿಕಾರಿಗಳು ಸಭೆ ನಡೆಸಿದರು. ಯುದ್ಧವನ್ನು ಕೊನೆಗೊಳಿಸುವಂತೆ ಯುಎನ್ ವುಮೆನ್ಸ್ ಏಜೆನ್ಸಿಯ ನಿರ್ದೇಶಕಿ ಸಿಮಾ ಬಹೈಸ್ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ರಷ್ಯಾಗೆ ಸೂಚನೆ ನೀಡಿದರು.

ಯುನಿಸೆಫ್‌ನ ತುರ್ತು ಕಾರ್ಯಕ್ರಮಗಳ ನಿರ್ದೇಶಕ ಮ್ಯಾನುಯೆಲ್ ಫಾಂಟೈನ್ ಕೂಡ ಯುದ್ಧವನ್ನು ಕೊನೆಗೊಳಿಸುವಂತೆ ರಷ್ಯಾಕ್ಕೆ ಮನವಿ ಮಾಡಿದರು. ಯುದ್ಧದಿಂದಾಗಿ ಮಕ್ಕಳು ನಿರಾಶ್ರಿತರಾಗುತ್ತಿದ್ದಾರೆ, ಅಂದಾಜು 3.2 ಮಿಲಿಯನ್ ಮಕ್ಕಳು ತಮ್ಮ ಮನೆಗಳಲ್ಲಿ ಉಳಿದಿದ್ದಾರೆ, ಅವರಲ್ಲಿ ಅರ್ಧದಷ್ಟು ಜನರಿಗೆ ಸಾಕಷ್ಟು ಆಹಾರವಿಲ್ಲ ಎಂದು ಅವರು ಕೌನ್ಸಿಲ್‌ಗೆ ತಿಳಿಸಿದರು.

ಉಕ್ರೇನ್‌ನಲ್ಲಿರುವ 7.5 ಮಿಲಿಯನ್ ಮಕ್ಕಳಲ್ಲಿ ಮೂರನೇ ಎರಡರಷ್ಟು ಪ್ರಸ್ತುತ ಸ್ಥಳಾಂತರಗೊಂಡಿದ್ದಾರೆ, 2.8 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ, ಇನ್ನೂ ಎರಡು ಮಿಲಿಯನ್ ಮಕ್ಕಳು ಬಂಧನದಲ್ಲಿದ್ದಾರೆ.ಒಟ್ಟಾರೆಯಾಗಿ 4.8 ಮಿಲಿಯನ್ ಮಕ್ಕಳು ನಿರಾಶ್ರಿತರಾಗಿದ್ದಾರೆ ಎಂದು ಫಾಂಟೈನ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!