ಹೊಸದಿಲ್ಲಿ: 2002ರ ಗುಜರಾತ್ನ ಗೋಧ್ರಾ ಹತ್ಯಾಕಾಂಡ ಪ್ರಕರಣದ ಅಂದಿನ ತನಿಖಾ ತಂಡದ ಮುಖ್ಯಸ್ಥ ಆರ್.ಕೆ.ರಾಘವನ್ ತಮ್ಮ ಆತ್ಮಚರಿತ್ರೆಯಾದ ‘ಎ ರೋಡ್ ವೆಲ್ ಟ್ರಾವೆಲ್ಡ್ ಪುಸ್ತಕದಲ್ಲಿ ಅಚ್ಚರಿಯ ವಿಷಯವನ್ನು ಉಲ್ಲೇಖಿಸಿದ್ದಾರೆ.
ಹೌದು , ಆರ್.ಕೆ.ರಾಘವನ್ ತಮ್ಮ ಆತ್ಮಚರಿತ್ರೆಯಲ್ಲಿ ನರೇಂದ್ರ ಮೋದಿ ಅವರ ಬಗ್ಗೆ ತಿಳಿಸಿದ್ದಾರೆ . 2002ರ ಗುಜರಾತ್ನ ಗೋಧ್ರಾ ಹತ್ಯಾಕಾಂಡ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ಕೇಳಿದ 100 ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೂ ತಪ್ಪಿಸಕೊಳ್ಳದೇ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಸುದೀರ್ಘ 9 ಗಂಟೆಗಳ ಮ್ಯಾರಥಾನ್ನಂತಹ ಪ್ರಶ್ನಾವಳಿ ಎದುರಿಸಿದ್ದರು. ತುಂಬಾ ಕೂಲ್ ಆಗಿ ಮತ್ತು ತನಿಖಾ ಅಧಿಕಾರಿಗಳಿಂದ ಒಂದೇ ಒಂದು ಕಪ್ ಟೀ ಸಹ ಸ್ವೀಕರಿಸಲಿಲ್ಲ ಎಂದು ಅಂದಿನ ತನಿಖಾ ತಂಡದ ಮುಖ್ಯಸ್ಥ ಆರ್.ಕೆ.ರಾಘವನ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ನರೇಂದ್ರ ಮೋದಿ ಅವರು ಆ ದಿನ ವಿಚಾರಣೆಗಾಗಿ ಗಾಂಧಿನಗರದ ಎಸ್ಐಟಿ ಕಚೇರಿಗೆ ಬರಲು ಒಪ್ಪಿಗೆ ಸೂಚಿಸಿದರು. ತಮ್ಮದೇ ನೀರಿನ ಬಾಟಲಿಯನ್ನು ಹಿಡಿದುಕೊಂಡು ಬಂದು ಎಸ್ಐಟಿಯ ವಿಚಾರಣೆ ಎದುರಿಸಿದ್ದರು ಎಂದು ರಾಘವನ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರನ್ನು ವಿಚಾರಣೆಗೆ ಕರೆದಿದ್ದರ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪಿಸಿದ ರಾಘವನ್, ಇದೇ ಉದ್ದೇಶಕ್ಕಾಗಿ ಅವರು ಎಸ್ಐಟಿ ಕಚೇರಿಗೆ ಖುದ್ದಾಗಿ ಬರಬೇಕು ಮತ್ತು ಅವರನ್ನು ಭೇಟಿಯಾಗಬೇಕು ಎಂದು ನಾವು ಅವರ ಸಿಬ್ಬಂದಿಗೆ ತಿಳಿಸಿದ್ದೆವು. ಬೇರೆ ಕಡೆ ವಿಚಾರಣೆ ನಡೆಸಿದ್ದರೆ ಅದು ತಪ್ಪಾಗಿ ಪರಿಗಣಿಸುವ ಸಾಧ್ಯತೆ ಇತ್ತು ಎಂದಿದ್ದಾರೆ. ಅಂದು ಅವರು (ಮೋದಿ) ನಮ್ಮ ನಿಲುವಿನ ಮನೋಭಾವ ಅರ್ಥಮಾಡಿಕೊಂಡರು. ಗಾಂಧಿನಗರದ ಸರ್ಕಾರಿ ಸಂಕೀರ್ಣದೊಳಗಿನ ಎಸ್ಐಟಿ ಕಚೇರಿಗೆ ಬರಲು ಒಪ್ಪಿದರು ಎಂದು ರಾಘವನ್ ಹೇಳಿದ್ದಾರೆ .
ಎಸ್ಐಟಿ ಸದಸ್ಯರಾದ ಅಶೋಕ್ ಮಲ್ಹೋತ್ರಾ ಮೋದಿ ಅವರನ್ನು ಪ್ರಶ್ನಿಸಲು ಅಸಾಮಾನ್ಯವಾದ ಹೆಜ್ಜೆ ಇಟ್ಟಿದ್ದರು. ಮುಖ್ಯವಾಗಿ ಮೋದಿ ಮತ್ತು ಅವರು ನಡುವೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಯಾವುದೇ ಕುಚೇಷ್ಟೆಯ ಆರೋಪ ತಪ್ಪಿಸಬೇಕಿತ್ತು ಎಂದು ಮಾಜಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮೋದಿ ಅವರ ವಿಚಾರಣೆಯು ಎಸ್ಐಟಿ ಕಚೇರಿಯಲ್ಲಿನ ನನ್ನ ಸ್ವಂತ ಕೊಠಡಿಯಲ್ಲಿ ಒಂಬತ್ತು ಗಂಟೆಗಳ ಕಾಲ ನಡೆಯಿತು. ತಡರಾತ್ರಿ ಕೊನೆಗೊಂಡ ಮ್ಯಾರಥಾನ್ ಪ್ರಶ್ನಾವಳಿಯ ಮೂಲಕ ಮೋದಿಯವರು ತಮ್ಮ ಕೂಲ್ ಮನೋಭಾವದ ಹಕ್ಕನ್ನು ಉಳಿಸಿಕೊಂಡಿದ್ದರು ಎಂದು ಮಲ್ಹೋತ್ರಾ ವಿಚಾರಣೆ ಬಳಿಕ ನನಗೆ ಹೇಳಿದ್ದರು ಎಂದು ರಾಘವನ್ ಬರೆದುಕೊಂಡಿದ್ದಾರೆ.
ಅವರು (ಮೋದಿ) ಎಂದಿಗೂ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳಲಿಲ್ಲ. ಅಲ್ಲದೇ ಅವರು ತಮ್ಮ ಪ್ರತಿಕ್ರಿಯೆ ಹೆಚ್ಚಿಸುವ ಭಾವನೆ ವ್ಯಕ್ತಪಡಿಸಲಿಲ್ಲ. ಮಲ್ಹೋತ್ರಾ ಅವರು ಊಟ ತಿನ್ನಲು ಬಯಸುತ್ತೀರಾ ಎಂದು ಕೇಳಿದಾಗ, ಆರಂಭದಲ್ಲೇ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಅವರು ತಮ್ಮದೇ ಆದ ನೀರಿನ ಬಾಟಲಿಯನ್ನು ಸಹ ತಂದಿದ್ದರು. ನೂರು ಬೆಸ್ ಪ್ರಶ್ನೆಗಳನ್ನು ಒಳಗೊಂಡಿದ್ದ ಮ್ಯಾರಥಾನ್ ಪ್ರಶ್ನೆಯ ಸಮಯದಲ್ಲಿ ಎಸ್ಐಟಿಯಿಂದ ಒಂದು ಕಪ್ ಚಹಾ ಸಹ ಸ್ವೀಕರಿಸಲಿಲ್ಲ ಎಂದು ಅವರು ಹೇಳಿದರು.
2002ರ ಗೋಧ್ರಾ ದಂಗೆ ಪ್ರಕರಣ ಸಂಬಂಧ ಗುಜರಾತ್ನ ನರೇಂದ್ರ ಮೋದಿ ಸರ್ಕಾರಕ್ಕೆ ನಾನಾವತಿ ಆಯೋಗ ಕ್ಲೀನ್ಚಿಟ್ ನೀಡಿತು. ಮೋದಿ ಮತ್ತು ಸರ್ಕಾರಿ ಹಿರಿಯ ಅಧಿಕಾರಿಗಳು ಸೇರಿದಂತೆ 63 ಮಂದಿಗೆ ಕ್ಲೀನ್ ಚಿಟ್ ಪಡೆದು ಪ್ರಕರಣದಿಂದ ಖುಲಾಸೆ ಗೊಂಡಿದ್ದರು.