ಉತ್ತರ ಇಟಲಿಯಲ್ಲಿ ಪ್ರವಾಹ ದುರಂತ: 9 ಸಾವು, ಫಾರ್ಮುಲಾ ಒನ್ ರೇಸ್ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಇಟಲಿ ಪ್ರವಾಹದಿಂದ ನಲುಗಿ ಹೋಗಿದೆ. ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಪ್ರವಾಹದಲ್ಲಿ ಮುಳುಗಿವೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಇಟಲಿಯ ಉತ್ತರ ಎಮಿಲಿಯಾ-ರೊಮ್ಯಾಗ್ನಾ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳ ಸಮೀಪವಿರುವ ಇಮೋಲಾದಲ್ಲಿ ಫಾರ್ಮುಲಾ ಒನ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಸರ್ಕಾರವು ತುರ್ತು ಸೇವೆಗಳ ಮೇಲಿನ ಒತ್ತಡವನ್ನು ತಗ್ಗಿಸಲು ಮತ್ತು ಮೋಟಾರು ರೇಸಿಂಗ್ ಅಭಿಮಾನಿಗಳು ಪ್ರವಾಹ ಪ್ರದೇಶಗಳಲ್ಲಿ ಜಮಾಯಿಸುವುದನ್ನು ತಡೆಯಲು ರದ್ದುಗೊಳಿಸಿದೆ.

ಎಮಿಲಿಯಾ-ರೊಮ್ಯಾಗ್ನಾ ಪ್ರದೇಶದ ಅಧ್ಯಕ್ಷ ಸ್ಟೆಫಾನೊ ಬೊನಾಸಿನಿ ಮಾತನಾಡಿ, ಹಿಂದೆಂದೂ ಇಲ್ಲದಂತೆ ಅಸಾಮಾನ್ಯವಾಗಿ ಮಳೆ ಸುರಿದಿದೆ ಎಂದರು. ಕ್ರಿಶ್ಚಿಯನ್ ಪಾರಂಪರಿಕ ತಾಣಗಳಿಗೆ ಹೆಸರುವಾಸಿಯಾದ ಆಡ್ರಿಯಾಟಿಕ್ ಕರಾವಳಿ ನಗರ ಸಂಪೂರ್ಣ ಮುಳುಗಡೆಯಾಗಿದೆ. ಸ್ಥಳೀಯ ಆಂತರಿಕ ಸಚಿವಾಲಯದ ವಕ್ತಾರರು ಸುಮಾರು 14,000 ಜನರನ್ನು ಸಾಧ್ಯವಾದಷ್ಟು ಬೇಗ ಪ್ರದೇಶದಿಂದ ಸ್ಥಳಾಂತರಿಸಬೇಕಾಗುತ್ತದೆ ಎಂದಿದ್ದಾರೆ. 37 ಪಟ್ಟಣಗಳು ​ ಪ್ರವಾಹಕ್ಕೆ ಸಿಲುಕಿದ್ದು, ಸುಮಾರು 120 ಭೂಕುಸಿತಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಡಲ ಉಪಾಧ್ಯಕ್ಷೆ ಐರಿನ್ ಪ್ರಿಯೊಲೊ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆ ಕಡಿಮೆಯಾದರೂ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!