Wednesday, August 17, 2022

Latest Posts

ತಲೆ ಮರೆಸಿಕೊಂಡಿದ್ದ 9 ವಾರೆಂಟ್ ಆರೋಪಿಗಳ ಬಂಧನ

ಹೊಸದಿಗಂತ ವರದಿ, ಶಿವಮೊಗ್ಗ:

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಒಟ್ಟು 9 ವಾರೆಂಟ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಪತ್ತೆ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿ.ಐ ವಸಂತ್ ಕುಮಾರ್, ಠಾಣಾ ಸಿಬ್ಬಂದಿಗಳಾದ ಮೋಹನ್, ಕೆ. ಮಂಜಪ್ಪ ಎಂ.ಹೆಚ್ ಮತ್ತು ಸ್ವಾಮಿ ಹಾಗೂ ಮಹದೇವ್ ರವರ ತಂಡ ರಚಿಸಿದ್ದರು. ಈ ತಂಡ ಕಳೆದ ಮೂರು ದಿನಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದ 9 ಜನ ಆರೋಪಿಗಳನ್ನು ಬಂಧಿಸಿದೆ.

ಆರೋಪಿಗಳ ಪೈಕಿ ಒಬ್ಬ ಕಳೆದ 5 ವರ್ಷಗಳಿಂದ, ಇಬ್ಬರು ಆರೋಪಿಗಳು ಕಳೆದ 02 ವರ್ಷಗಳಿಂದ ಹಾಗೂ 6 ಮಂದಿ ಕಳೆದ 01 ವರ್ಷದಿಂದ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!