Wednesday, July 6, 2022

Latest Posts

90ಕ್ಕೂ ಹೆಚ್ಚು ಕಾಗೆಗಳ ನಿಗೂಢ ಸಾವು: ಲಗ್ಗೆ ಇಟ್ಟಿತಾ ಹೆಚ್1ಬಿ8 ವೈರಸ್?

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಕೋವಿಡ್ ಸಂಕಷ್ಟದ ನಡುವೆಯೇ ಮಧ್ಯಪ್ರದೇಶದಲ್ಲಿ ಮತ್ತೊಂದು ಆತಂಕ ಎದುರಾಗಿದೆ.
ಇಲ್ಲಿನ ಇಂದೋರ್‌ನ ಡಾಲಿ ಕಾಲೇಜ್ ಆವರಣದಲ್ಲಿ ಸುಮಾರು 90 ಕ್ಕೂ ಹೆಚ್ಚು ಕಾಗೆಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಹಕ್ಕಿ ಜ್ವರ ಲಗ್ಗೆ ಇಟ್ಟಿರುವ ಆತಂಕ ಎದುರಾಗಿದೆ.

ಕಾಗೆಗಳು ಡಾಲಿ ಕಾಲೇಜ್ ಆವರಣದಲ್ಲಿ ಸತ್ತು ಬಿದ್ದಿರುವುದನ್ನು ಗಮನಿಸಿ ಪರೀಕ್ಷೆ ಕೈಗೊಳ್ಳಲಾಗಿದೆ. ಈ ಸಂದರ್ಭ ಇವುಗಳಲ್ಲಿ ಹೆಚ್1ಬಿ8 ವೈರಸ್ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮೃತಪಟ್ಟ ಕಾಗೆಗಳನ್ನು ಮಾರ್ಗಸೂಚಿಗಳ ಪ್ರಕಾರ ಹೂಳಲಾಗಿದೆ. ಮರಗಳು ಸೇರಿದಂತೆ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಪಶು ವೈದ್ಯಕೀಯ ವಿಭಾಗದ ಉಪನಿರ್ದೇಶಕ ಪಿ.ಕೆ. ಶರ್ಮಾ ಹೇಳಿದ್ದಾರೆ.

ರಾಜಸ್ಥಾನದಲ್ಲಿಯೂ ಹಕ್ಕಿ ಜ್ವರದ ಆತಂಕ ಎದುರಾಗಿದ್ದು, ಇಂದೋರ್ ನಲ್ಲಿ 96 ಕಾಗೆ ಮೃತಪಟ್ಟ ಕಾರಣ ಆ ಪ್ರದೇಶದ ಜನ ಎಚ್ಚರಿಕೆ ವಹಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss