Friday, July 1, 2022

Latest Posts

ಮೈಸೂರು-ಚಾಮರಾಜನಗರ ಜಿಲ್ಲೆಗಳಿಂದ ಶೇ 99.73 ರಷ್ಟು ಮತದಾನ

ಹೊಸ ದಿಗಂತ ವರದಿ,ಮೈಸೂರು:

ಮೈಸೂರು-ಚಾಮರಾಜನಗರ ಜಿಲ್ಲೆಗಳಿಂದ ವಿಧಾನ ಪರಿಷತ್‌ನ ದ್ವಿಸದಸ್ಯ ಸ್ಥಾನಕ್ಕೆ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಮೈಸೂರು ಜಿಲ್ಲೆಯಲ್ಲಿ ಶೇ 99.76ರಷ್ಟು ಮತದಾನವಾದರೆ, ಚಾಮರಾಜನಗರ ಜಿಲ್ಲೆಯಲ್ಲಿ ಶೇ 99.69 ಮತದಾನವಾಗಿದೆ. ಎರಡು ಜಿಲ್ಲೆಗಳಿಂದ ಒಟ್ಟಾರೆಯಾಗಿ ಶೇ 99.73ರಷ್ಟು ಮತದಾನವಾಗಿದೆ.
ಮೈಸೂರು ಜಿಲ್ಲೆಯ ಮತದಾನದ ವಿವರ: ಮೈಸೂರು ಜಿಲ್ಲೆಯಲ್ಲಿ ಒಟ್ಟು 4512 ಮಂದಿ ಮತದಾರರಲ್ಲಿ 4501 ಮಂದಿ ಮತ ಚಲಾವಣೆ ಮಾಡಿದ್ದಾರೆ. ಇವರಲ್ಲಿ 2162 ಮಂದಿ ಪುರುಷರು, 2338 ಮಂದಿ ಮಹಿಳೆಯರು ಮತದಾನ ಮಾಡಿದ್ದಾರೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಶೇ 99.83 ಮತದಾನವಾಗಿದ್ದು, 574 ಮಂದಿ ಮತದಾನ ಮಾಡಿದ್ದು, ಇವರಲ್ಲಿ 274 ಮಂದಿ ಪುರುಷರು, 300 ಮಂದಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕೆ.ಆರ್.ನಗರ ತಾಲೂಕಿನಲ್ಲಿ ಶೇ 99.83 ರಷ್ಟು ಮತದಾನವಾಗಿದೆ. ಇಲ್ಲಿ 582 ಮಂದಿ ಮತದಾನ ಮಾಡಿದ್ದಾರೆ. ಇವರಲ್ಲಿ 283 ಮಂದಿ ಪುರುಷರು, 298 ಮಂದಿ ಮಹಿಳೆಯರು ಮತದಾನ ಮಾಡಿದ್ದಾರೆ.
ಹುಣಸೂರು ತಾಲೂಕಿನಲ್ಲಿ ಶೇ 99.84 ರಷ್ಟು ಮತದಾನವಾಗಿದ್ದು, 633 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇವರಲ್ಲಿ 307 ಮಂದಿ ಪುರುಷರು, 326 ಮಂದಿ ಮಹಿಳೆಯರು ಮತ ಹಾಕಿದ್ದಾರೆ.
ಮೈಸೂರು ತಾಲೂಕಿನಲ್ಲಿ ಶೇ 99.83ರಷ್ಟು ಮತದಾನವಾಗಿದ್ದು, ಇಲ್ಲಿ 585 ಮಂದಿ ಮತ ಚಲಾವಣೆ ಮಾಡಿದ್ದು, ಇವರಲ್ಲಿ 288 ಮಂದಿ ಪುರುಷರು ಹಾಗೂ 297 ಮಂದಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನಲ್ಲಿ ಶೇ 99.77ರಷ್ಟು ಮತದಾನವಾಗಿದ್ದು, ಇಲ್ಲಿ 430 ಮಂದಿ ಮತದಾನ ಮಾಡಿದ್ದಾರೆ. ಇವರಲ್ಲಿ 205 ಮಂದಿ ಪುರುಷರು ಹಾಗೂ 225 ಮಂದಿ ಮಹಿಳೆಯರು ಮತ ಹಾಕಿದ್ದಾರೆ.
ಸರಗೂರು ತಾಲೂಕಿನಲ್ಲಿ ಶೇ 99.02ರಷ್ಟು ಮತದಾನವಾಗಿದ್ದು, ಇಲ್ಲಿ 202 ಮಂದಿ ಮತದಾನ ಮಾಡಿದ್ದು, ಇವರಲ್ಲಿ 95 ಮಂದಿ ಪುರುಷರು ಹಾಗೂ 107 ಮಂದಿ ಮಹಿಳೆಯರಾಗಿದ್ದಾರೆ.
ನಂಜನಗೂಡು ತಾಲೂಕಿನಲ್ಲಿ ಶೇ 99.88 ರಷ್ಟು ಮತದಾನವಾಗಿದ್ದು, ಇಲ್ಲಿ 842 ಮಂದಿ ಮತದಾನ ಮಾಡಿದ್ದಾರೆ. ಇವರಲ್ಲಿ 399 ಮಂದಿ ಪುರುಷರು ಹಾಗೂ 443 ಮಂದಿ ಮಹಿಳೆಯರು ಮತ ಚಲಾವಣೆ ಮಾಡಿದ್ದಾರೆ.
ತಿ.ನರಸೀಪುರ ತಾಲೂಕಿನಲ್ಲಿ ಶೇ 99.54ರಷ್ಟು ಮತದಾನವಾಗಿದ್ದು, ಇಲ್ಲಿ 653 ಮಂದಿ ಮತ ಹಾಕಿದ್ದಾರೆ. ಇವರಲ್ಲಿ 311 ಮಂದಿ ಪುರುಷರು, 342 ಮಂದಿ ಮಹಿಳೆಯರು ಮತದಾನ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಮತದಾನದ ವಿವರ:
ಚಾಮರಾಜನಗರ ಜಿಲ್ಲೆಯಲ್ಲಿ ಶೇ 99.69ರಷ್ಟು ಮತದಾನವಾಗಿದ್ದು, ಇಲ್ಲಿ 2268 ಮಂದಿ ಮತದಾನ ಮಾಡಿದ್ದು, ಇವರಲ್ಲಿ 1082 ಮಂದಿ ಪುರುಷರು ಹಾಗೂ 1186 ಮಂದಿ ಪುರುಷರು ಮತ ಹಾಕಿದ್ದಾರೆ.
ಈ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ 99.81ರಷ್ಟು ಮತದಾನವಾಗಿದ್ದು, ಇಲ್ಲಿ 520 ಮಂದಿ ಮತದಾನ ಮಾಡಿದ್ದಾರೆ. ಇವರಲ್ಲಿ 247 ಮಂದಿ ಪುರುಷರು ಹಾಗೂ 273 ಮಂದಿ ಮಹಿಳೆಯರು ಮತಹಾಕಿದ್ದಾರೆ.
ಚಾಮರಾಜನಗರ ತಾಲೂಕಿನಲ್ಲಿ ಶೇ 99.74ರಷ್ಟು ಮತದಾನವಾಗಿದ್ದು, ಇಲ್ಲಿ 776 ಮಂದಿ ಮತ ಹಾಕಿದ್ದಾರೆ. ಇವರಲ್ಲಿ 368 ಮಂದಿ ಪುರುಷರು ಹಾಗೂ 408 ಮಂದಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಯಳಂದೂರು ತಾಲೂಕಿನಲ್ಲಿ ಶೇ 99.02ರಷ್ಟು ಮತದಾನವಾಗಿದ್ದು, ಇಲ್ಲಿ 203 ಮಂದಿ ಮತಹಾಕಿದ್ದಾರೆ. ಇವರಲ್ಲಿ 98 ಮಂದಿ ಪುರುಷರು ಹಾಗೂ 105 ಮಂದಿ ಮಹಿಳೆಯರಿದ್ದಾರೆ.
ಕೊಳ್ಳೇಗಾಲ ತಾಲೂಕಿನಲ್ಲಿ ಶೇ 99.70ರಷ್ಟು ಮತದಾನವಾಗಿದ್ದು, ಇಲ್ಲಿ 334 ಮಂದಿ ಮತ ಚಲಾವಣೆ ಮಾಡಿದ್ದಾರೆ. ಇವರಲ್ಲಿ 164 ಮಂದಿ ಪುರುಷರು ಹಾಗೂ 170 ಮಂದಿ ಮಹಿಳೆಯರು ಮತ ಹಾಕಿದ್ದಾರೆ.
ಹನೂರು ತಾಲೂಕಿನಲ್ಲಿ ಶೇ 99.77ರಷ್ಟು ಮತದಾನವಾಗಿದ್ದು, ಇಲ್ಲಿ 435 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 205 ಮಂದಿ ಪುರುಷರು ಹಾಗೂ 230 ಮಂದಿ ಮಹಿಳೆಯರು ಮತದಾನ ಮಾಡಿದ್ದಾರೆ.
ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ನಿಧಾನಗತಿಯಲ್ಲಿ ನಡೆಯಿತು. ಮಧ್ಯಾಹ್ನದ ವೇಳೆಗೆ ಬಿರುಸುಗೊಂಡಿತು. ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ, ಜಿ.ಪಂ, ತಾ.ಪಂ ಹಾಗೂ ಗ್ರಾಮಪಂಚಾಯಿತಿ ಸದಸ್ಯರು ಮತಗಟ್ಟೆಗೆ ಆಗಮಿಸಿ, ಮತದಾನ ಮಾಡಿದರು. ಮಧ್ಯಾಹ್ನ 12 ರವೇಳೆ ಶೇ 37.40 ರಷ್ಟು ಮತದಾನವಾಯಿತು. ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ, ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ವಿಪ್ ಮೂಲಕ ಸೂಚನೆ ನೀಡಿದ್ದರಿಂದ, ಸದಸ್ಯರು ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು. ಮತಗಟ್ಟೆಯ ಬಳಿಯಿದ್ದ ಏಜೆಂಟರುಗಳು ಯಾವ್ಯಾವ ಸದಸ್ಯರು ಮತ ಹಾಕಲು ಬಂದಿದ್ದಾರೆ, ಯರ‍್ಯಾರು ಬಂದಿಲ್ಲ ಎಂದು ತಿಳಿದು, ಮತ ಹಾಕಲು ಬಾರದವರನ್ನು ಕರೆತಂದು ಮತಹಾಕಿಸುವ ಕೆಲಸ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss