ಹೊಸ ದಿಗಂತ ವರದಿ,ಮಡಿಕೇರಿ:
ಅವಳಿ ಜಿಲ್ಲೆ ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಸ್ಥಾನದ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇ.99.86 ರಷ್ಟು ಮತದಾನವಾಗಿದೆ.
ಅವಳಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯ ಮತದಾರರು ಒಟ್ಟು 7363 ರಷ್ಟಿದ್ದು, ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಒಟ್ಟು 7353 ಸದಸ್ಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ಪೈಕಿ 3505 ಪುರುಷರು ಹಾಗೂ 3848 ಮಹಿಳೆಯರು ಮತದಾನ ಮಾಡಿದ್ದಾರೆ.
ಅವಳಿ ಜಿಲ್ಲೆಯಲ್ಲಿ ಒಟ್ಟು 411 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ವಿಜಯಪುರ ಶೇ.99.87 ರಷ್ಟು ಹಾಗೂ ಬಾಗಲಕೋಟೆ ಶೇ.99.85 ರಷ್ಟು ಮತದಾನವಾಗಿದೆ.