Wednesday, June 29, 2022

Latest Posts

ಪರಿಷತ್ ಚುನಾವಣೆ: ಚಿತ್ರದುರ್ಗ ಜಿಲ್ಲೆಯಲ್ಲಿ ಶೇ 99.87 ರಷ್ಟು ಮತದಾನ

ಹೊಸ ದಿಗಂತ ವರದಿ, ಚಿತ್ರದುರ್ಗ:
ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶುಕ್ರವಾರ ಮತದಾನ ನಡೆಯಿತು. ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ ೯೯.೮೭ ರಷ್ಟು ಮತದಾನ ನಡೆದಿದೆ.
ಜಿಲ್ಲೆಯ ಜಿ.ಪಂ., ತಾ.ಪಂ. ಹಾಗೂ ಕೆಲವು ಪಟ್ಟಣ ಪಂಚಾಯಿತಿಗಳನ್ನು ಹೊರತುಪಡಿಸಿ ಇತರೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ವಿಧಾನ ಪರಿಷತ್ ಚುನಾವಣೆಗೆ ಶುಕ್ರವಾರ ಮತದಾಣ ಮಾಡಿದರು. ೩೫೧ ಪುರುಷ ಮತದಾರರು ಹಾಗೂ ೪೧೨ ಮಹಿಳಾ ಮತದಾರರು ಸೇರಿದಂತೆ ಒಟ್ಟು ೭೬೩ ಮತದಾರಿದ್ದಾರೆ. ಅವರಲ್ಲಿ ೩೫೦ ಪುರುಷ ಮತದಾರರು ಮತ್ತು ೪೧೨ ಮಹಿಳಾ ಮತದಾರರು ಸೇರಿದಂತೆ ಒಟ್ಟು ೭೬೨ ಜನ ಮತದಾರರು ಮತದಾನ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss