ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ವರ್ಷಗಳಿಂದ ತೆಲುಗಿನ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸಾಫೀಸ್ ಧೂಳೆಬ್ಬಿಸುತ್ತಿವೆ. ಟಾಲಿವುಡ್ ಸಿನಿಮಾಗಳು ಬಾಲಿವುಡ್ ನಲ್ಲೂ ಸಖತ್ ಸಕ್ಸಸ್ ಕಾಣುತ್ತಿವೆ. ತೆಲುಗು ಸಿನಿಮಾಗಳಿಗೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ತೆಲುಗು ಚಿತ್ರಗಳ ಹೊಗಳಿಕೆಯನ್ನು ಬದಿಗಿಟ್ಟು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತೆಲುಗು ಚಿತ್ರಗಳ ಬಗ್ಗೆ ಕೆಲ ಟೀಕೆಗಳನ್ನು ಮಾಡಿದ್ದಾರೆ.
ಇತ್ತೀಚೆಗಷ್ಟೇ ಖ್ಯಾತ ನಿರ್ದೇಶಕ ರಾಘವೇಂದ್ರರಾವ್ ಅವರು ಬರೆದಿರುವ ‘ನೇನು ಸಿನಿಮಾಕಿ ರಾಸುಕುನ್ನ ಪ್ರೇಮಲೇಖ’ ಪುಸ್ತಕ ಬಿಡುಗಡೆ ಮಾಡಲಾಯಿತು. ಬಿಡುಗಡೆ ಸಮಾರಂಭದಲ್ಲಿ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರು ಭಾಗಿಯಾಗಿ ತೆಲುಗು ಚಿತ್ರರಂಗದ ಬಗ್ಗೆ ಪ್ರತಿಕ್ರಿಯಿಸಿದರು. ಈ ಬರುತ್ತಿರುವ ತೆಲುಗು ಸಿನಿಮಾಗಳು ಕೆಲ ಸಮಯ ಮನರಂಜನೆಗಾಗಿ ಮಾತ್ರ ಸೀಮಿತವಾಗಿವೆ. ಹಿಂದಿನಂತೆ ಬಹುಕಾಲ ನೆನಪಿನಲ್ಲಿ ಉಳಿಯುವ ಒಳ್ಳೆಯ ಸಿನಿಮಾಗಳಿಲ್ಲ. ಈಗ ತೆಲುಗು ಸಿನಿಮಾಗಳ ಪರಿಸ್ಥಿತಿ ಹೇಗಿದೆ ಎಂದರೆ ಅವುಗಳ ಶೀರ್ಷಿಕೆ ನೋಡಿ ಡೈಲಾಗ್ಗಳನ್ನು ಅರ್ಥ ಮಾಡಿಕೊಳ್ಳಬಹುದು. ತೆಲುಗು ಚಿತ್ರರಂಗವನ್ನು ಇಂತಹ ಶೋಚನೀಯ ಸ್ಥಿತಿಗೆ ತರಬೇಡಿ ಎಂದು ಮನವಿ ಮಾಡಿಕೊಂಡರು. ಒಂದೆಡೆ ತೆಲುಗು ಸಿನಿಮಾ ಅಮೋಘ ಎಂದು ಮಾತನಾಡುತ್ತಿರುವ ಸಮಯದಲ್ಲಿ ಇಂತಹ ಕಮೆಂಟ್ಸ್ ಮಾಡುತ್ತಿರುವುದು ಟಾಲಿವುಡ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ.