ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಡಾದ ಮಹಿಳಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಕೋಚ್ ಸೇರಿ ನಾಲ್ವರು ಆಟಗಾರ್ತಿಯರಿಗೆ ಇಂಜುರಿಯಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮಹಿಳಾ ಸೀನಿಯರ್ ಟಿ 20ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು ನಂತರ ತಂಡ ಮನೆಗೆ ಹಿಂದಿರುಗುವಾಗ ಘಟನೆ ನಡೆದಿದೆ.
ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಬಸ್ ಮುಂಭಾಗ ಹಾನಿಯಾಗಿದೆ. ಯಾವುದೇ ಆಟಗಾರ್ತಿಯರಿಗೆ ಗಂಭೀರ ಗಾಯಗೊಂಡಿಲ್ಲ. ಇಂಜುರಿಯಾಗಿದ್ದ ಆಟಗಾರ್ತಿಯರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಎಲ್ಲರನ್ನೂ ಡಿಸ್ಚಾರ್ಜ್ ಮಾಡಲಾಗಿದೆ.