ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಾಯಣದ ಕಥೆಯನ್ನು ಆಧರಿಸಿದ ಆದಿಪುರುಷ ಚಿತ್ರ ವಿಶ್ವದಾದ್ಯಂತ 6200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ 4000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದು, ಈ ಸಿನಿಮಾ ನೇಪಾಳದಲ್ಲೂ ಸದ್ದು ಮಾಡುತ್ತಿದೆ.
ಈ ಚಿತ್ರದಲ್ಲಿ ಸೀತೆ ಹುಟ್ಟಿದ್ದು ಭಾರತದಲ್ಲಿ ಎಂಬ ಡೈಲಾಗ್ ಇದೆ. ಇತಿಹಾಸದ ಪ್ರಕಾರ ಸೀತಾ ಮಾತೆ ನೇಪಾಳದಲ್ಲಿ ಹುಟ್ಟಿದ್ದೆಂದೂ, ಈ ಡೈಲಾಗ್ ತೆಗೆಯದಿದ್ದರೆ ಚಿತ್ರ ಬಿಡುಗಡೆಗೆ ಅವಕಾಶ ನೀಡದಿರುವುದಾಗಿ ನೇಪಾಳ ಸೆನ್ಸಾರ್ ಮಂಡಳಿ ಸ್ಪಷ್ಟಪಡಿಸಿದೆ. ಈ ಡೈಲಾಗ್ ಬಗ್ಗೆ ನೇಪಾಳಿ ನಾಯಕರೂ ಕೋಪಗೊಂಡಿದ್ದಾರೆ. ಚಿತ್ರತಂಡ ಈ ಡೈಲಾಗ್ ಅನ್ನು ಚಿತ್ರದಿಂದ ತೆಗೆದು ಬಿಡುಗಡೆಗೆ ಲೈನ್ ಕ್ಲಿಯರ್ ಮಾಡಿದೆ. ಆದರೆ ಇಂದು ಬೆಳಗ್ಗಿನ ಶೋಗಳನ್ನು ಹಲವರು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿನಿಮಾ ಟಾಕ್‌ಗೆ ಬಂದರೆ ಮೊದಲಾರ್ಧದ ಕೆಲವು ದೃಶ್ಯಗಳು ಮೈ ಜುಮ್ಮೆಸಲಿವೆ ಎನ್ನಲಾಗುತ್ತಿದೆ. ದ್ವಿತೀಯಾರ್ಧ ತುಸು ದೀರ್ಘವಾಗಿದ್ದರೂ ಸಾಹಸ ದೃಶ್ಯಗಳು ಆಕರ್ಷಕವಾಗಿವೆ. ಇನ್ನು ಗ್ರಾಫಿಕ್ಸ್ ವಿಚಾರಕ್ಕೆ ಬಂದರೆ ಸಿನಿಮಾದ ಕೆಲವೆಡೆ ವಿಎಫ್ ಎಕ್ಸ್ ವರ್ಕ್ ಸೆಟ್ ಆಗಿಲ್ಲ ಎಂಬ ಕಾಮೆಂಟ್ ಗಳು ಕೇಳಿ ಬರುತ್ತಿವೆ.