ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ ಅಮೆರಿಕದ ಹೂಡಿಕೆದಾರರನ್ನು ಭೇಟಿ ಮಾಡಿದರು. ನ್ಯೂಯಾರ್ಕ್‌ನಲ್ಲಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಎಲಾನ್ ಮಸ್ಕ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಆ ನಂತರ ಪ್ರಧಾನಿ ಮೋದಿ ಅವರು ಪ್ರೊಫೆಸರ್ ಪಾಲ್ ರೋಮರ್ ಅವರೊಂದಿಗೆ ಸಭೆ ನಡೆಸಿದರು.
ನಂತರ, ಅಮೆರಿಕನ್ ಖಗೋಳ ಭೌತಶಾಸ್ತ್ರಜ್ಞ, ಬರಹಗಾರ ಮತ್ತು ವಿಜ್ಞಾನ ಸಂವಹನಕಾರ ನೀಲ್ ಡಿ ಗ್ರಾಸ್ ಟೈಸನ್ ಅವರೊಂದಿಗೂ ಮಾತುಕತೆ ನಡೆಸಿದರು. ನ್ಯೂಯಾರ್ಕ್‌ನಲ್ಲಿ, ಪ್ರಧಾನ ಮಂತ್ರಿಗಳು ಶಿಕ್ಷಣ ತಜ್ಞರು ಮತ್ತು ಚಿಂತಕರ ಗುಂಪುಗಳ ಸದಸ್ಯರನ್ನು ಭೇಟಿ ಮಾಡಿದರು ಮತ್ತು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಜೊತೆಗೆ ಆರೋಗ್ಯ ತಜ್ಞರ ಗುಂಪುಗಳ ಸದಸ್ಯರನ್ನು ಭೇಟಿ ಮಾಡಿದರು.
ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ-ಅಮೆರಿಕನ್ ಗಾಯಕರೊಂದಿಗೆ ಪ್ರಧಾನ ಮಂತ್ರಿ ಮಾತನಾಡಿದರು. ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು, ಬುದ್ಧಿಜೀವಿಗಳು, ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ತಜ್ಞರನ್ನು ಭೇಟಿ ಮಾಡಿ ಭಾರತದಲ್ಲಿ ಹೂಡಿಕೆ ಕುರಿತು ಮಾತನಾಡಿದರು.