ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಜಾಹೀರಾತು ಉದ್ಯಮಿ, ಪ್ರಸಿದ್ಧ ಅಮುಲ್ ಗರ್ಲ್ ಚಿತ್ರದ ಸೃಷ್ಟಿಕರ್ತ ಸಿಲ್ವೆಸ್ಟರ್ ದಕುನ್ಹಾ ಅವರು ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದಾರೆ.
ದಕುನ್ಹಾ ನಿರ್ಮಿಸಿದ ಅಮುಲ್ ಗರ್ಲ್ ಚಿತ್ರ ಹಾಗೂ ‘ಅಟ್ಟರ್ಲಿ ಬಟ್ಟರ್ಲಿ ಡಿಲೀಷಿಯಸ್’ ಎನ್ನುವ ಅಡಿಬರಹ ಭಾರಿ ಮನ್ನಣೆ ಪಡೆದಿದೆ.
ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಈ ಕುರಿತು ಟ್ವೀಟ್ ಮಾಡಿದ್ದು, ಅವರ ಸಂತಾಪದ ಪೋಸ್ಟ್ ಅನ್ನು ನೋಡಿದ ಹಲವರು ದಕುನ್ಹಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.