‘ಪವರ್’ ಪ್ರೊಟೆಸ್ಟ್| ಕಲಬುರಗಿಯಲ್ಲಿ ವಿದ್ಯುತ್ ದರ ಪುನರ್ ಪರಿಶೀಲನೆಗೆ ಆಗ್ರಹ

ಹೊಸದಿಗಂತ ವರದಿ ಕಲಬುರಗಿ:

ಕಲ್ಯಾಣ ಕನಾ೯ಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಲಬುರಗಿ, ಗುಲ್ಬರ್ಗ ದಾಲ್ ಮಿಲ್ಲಸ್೯ ಅಸೋಸಿಯೇಷನ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕನಾ೯ಟಕ ಸಕಾ೯ರ ವಿದ್ಯುತ್ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಕಲಬುರಗಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ ಬಂದ್ ಮಾಡಿಸಿ ಪ್ರತಿಭಟನೆ ನಡೆಸಲಾಯಿತು.

ನಗರದ ಕಿರಾಣಿ ಬಜಾರ್ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೂ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿ ಮೂಲಕ ಸಕಾ೯ರಕ್ಕೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕಲ್ಯಾಣ ಕನಾ೯ಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಪಾಟೀಲ್, ಯಾರಿಗೂ ನೋಟಿಸ್ ನೀಡದೆ ವಿದ್ಯುತ್ ದರ ಏರಿಕೆ ಮಾಡಿದ್ದು,ಕೈಗಾರಿಕಾ ಉದ್ಯಮಿಗಳಿಗೆ ಹೊರೆ ಬಿದ್ದಂತಾಗಿದೆ. ರಾಜ್ಯ ಸಕಾ೯ರ ನಮ್ಮ ಮೇಲೆ ಹಾಗೂ ಸಾವ೯ಜನಿಕರ ಹೊರೆ ಹಾಕಿದ ವಿದ್ಯುತ್ ದರವನ್ನು ಕೂಡಲೇ ಪುನರ್ ಪರಿಶೀಲನೆ ಮಾಡಬೇಕು ಎಂದು ಹೇಳಿದರು.

ಒಂದು ತಿಂಗಳಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ಸಕಾ೯ರ ಹಾಗೂ ಕೆಇಆರಸಿ ವಿದ್ಯುತ್ ದರವನ್ನು ಏರಿಕೆ ಮಾಡಿ,ವ್ಯಾಪಾರ ವಹಿವಾಟು ಮಾಡುವವರಿಗೆ ಹೊರೆ ನೀಡಿದೆ ಎಂದ ಅವರು,ಕೂಡಲೇ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನೂ ಬೆಳಿಗ್ಗೆಯಿಂದಲೇ ಕಲಬುರಗಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಉದ್ಯಮಿಗಳು, ವ್ಯಾಪಾರಸ್ಥರು ಸ್ವಯಂಘೋಷಿತವಾಗಿ ಅಂಗಡಿ ಮುಂಗ್ಗಟ್ಟುಗಳನು ಬಂದ್ ಮಾಡಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆ ಮಾಗ೯ದಲ್ಲಿ ಸಂಗೀತಾ ಮೊಬೈಲ್ ಅಂಗಡಿ ತೆರೆದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಪ್ರತಿಭಟನಾ ಕಾರರು ಅಂಗಡಿಯನ್ನು ಬಂದ್ ಮಾಡಿಸಿ,ಪ್ರತಿಭಟನೆಯನ್ನು ಮುಂದುವರೆಸಿದರು.

ಈ ಸಂದರ್ಭದಲ್ಲಿ ವಿವಿಧ ವಾಣಿಜ್ಯೋದ್ಯಮಿ ಪದಾಧಿಕಾರಿಗಳು ಹಾಗೂ ಸಾವ೯ಜನಿಕರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!