ನಮ್ಮ ಸರ್ಕಾರ ಬೆಲೆ ಹೆಚ್ಚು ಮಾಡಿಲ್ಲ, ಇದಕ್ಕೂ ನಮಗೂ ಸಂಬಂಧ ಇಲ್ಲ: ಸಚಿವ ಎಂ.ಬಿ.ಪಾಟೀಲ

ಹೊಸದಿಗಂತ ವರದಿ ವಿಜಯಪುರ:

ವಿದ್ಯುತ್ ದರ ಹೆಚ್ಚಳ ಮಾಡಿದ್ದು ನಮ್ಮ ಸರ್ಕಾರ ಅಲ್ಲಾ. ಸ್ವಾಯತ್ತ ಹೊಂದಿರುವಂತಹ ಕೆಇಆರ್‌ಸಿ ಈ ವಿದ್ಯುತ್ ದರವನ್ನು ಹೆಚ್ಚಳ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯುತ್ ದರ ಹೆಚ್ಚಳ ನಮ್ಮ ಸರ್ಕಾರ ಬರುವ ಮೊದಲೇ ಮಾಡಿದೆ. ಹೀಗಾಗಿ ಬೆಲೆ ಏರಿಕೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ಅದನ್ನು ಹಿಂಪಡೆಯಲು ಆಗಲ್ಲಾ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ ಎಂದರು.

ಆದರೂ ಸಹ ನಾನು ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ. ಕೈಗಾರಿಕೆಗಳಿಗೆ ದಯವಿಟ್ಟು ಸಹಕಾರ ನೀಡಿ ಎಂದು ವಿನಂತಿಸುತ್ತೇನೆ ಎಂದು ತಿಳಿಸಿದರು.

ಕೆಇಆರ್‌ಸಿ ಇಂದ ವಿದ್ಯುತ್ ದರ ಆಗಾಗ ಏರಿಕೆ ಆಗುತ್ತಿರುತ್ತದೆ. ಅದನ್ನು ಸರ್ಕಾರ ಮಾಡುವುದಲ್ಲ, ಕೆಇಆರ್‌ಸಿ ಅವರು ಆಗಾಗ ಏರಿಕೆ ಮಾಡ್ತಾರೆ. ಇವತ್ತು ದರ ಏರಿಕೆ ಮಾಡಿದಾರೆ, ಮುಂದೆ ಕೂಡ ಕಾಲಕಾಲಕ್ಕೆ ಮಾಡ್ತಿರ್ತಾರೆ ಎಂದರು.

ಎಲ್ಲರೂ ಸಹಕಾರ ನೀಡಿದರೆ ಸಿಎಂ ಹಾಗೂ ಇಂಧನ ಸಚಿವ ಜಾರ್ಜ್ ಜೊತೆ ಚರ್ಚೆ ಮಾಡಿ ಏನು ಪರಿಹಾರ ಕೊಡಲು ಸಾಧ್ಯವಿದೆ ಅದನ್ನು ಮಾಡ್ತೇವೆ ಎಂದು ಭರವಸೆ ನೀಡಿದರು.

ಇದೇ ವೇಳೆ ಬಡವರು ತಿನ್ನುವ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!