ಬೃಹತ್ ಸಮಾವೇಶ ಮುನ್ನವೇ ವಿಪಕ್ಷಗಳ ನಡುವೆ ಶುರುವಾಯಿತಾ ವೈಮನಸ್ಸು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗಾದರೂ ಮಾಡಿ ಸೋಲಿಸಬೇಕೆಂಬ ಪಣ ತೊಟ್ಟಿರುವ ವಿಪಕ್ಷಗಳು ನಾಳೆ ಪಾಟ್ನಾದಲ್ಲಿ ಬೃಹತ್ ಸಮಾವೇಶ ಆಯೋಜಿಸಿದೆ.

ಈ ಸಭೆಯು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದ್ದು, ಹಲವು ಪಕ್ಷಗಳ ಪಾಲ್ಗೊಳ್ಳುತ್ತಿದೆ. ಎನ್‌ಡಿಎ ವಿರೋಧಿ ಕೂಟದ 20ಕ್ಕೂ ಹೆಚ್ಚು ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದೆ. ಆದರೆ ಇದೀಗ ಸಭೆಯ ಮುನ್ನವೇ ವಿಪಕ್ಷಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಲಕ್ಷಣ ಕಾಣುತ್ತಿದ್ದು, ಗ ನಾಳೆ ಪಾಟ್ನಾದಲ್ಲಿ ಆಯೋಜಿಸಿರುವ ಈ ಸಭೆಗೆ ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಅಲಭ್ಯರಾಗಿದ್ದಾರೆ.

ಕುಟುಂಬದ ಕಾರ್ಯಕ್ರಮದ ಕಾರಣ ಮೈತ್ರಿ ಪಕ್ಷದ ಸಭೆಗೆ ಆಗಮಿಸುತ್ತಿಲ್ಲ ಎಂಬ ಕಾರಣವನ್ನು ಜಯಂತ್ ಚೌಧರಿ ನೀಡಿದ್ದಾರೆ. ಈ ಕುರಿತು ನಿತೀಶ್ ಕುಮಾರ್‌ಗೆ ಪತ್ರ ಬರೆದಿದ್ದಾರೆ. ಆದರೆ ಆರ್‌ಎಲ್‌ಡಿ ನಾಯಕ ಸಭೆಯಿಂದ ಗೈರಾದ ಹಿಂದೆ ಒಡಕು ಕಾರಣವೇ ಅನ್ನೋ ಮಾತುಗಳು ಚರ್ಚೆಯಾಗುತ್ತಿದೆ. ಇತ್ತ ಈಗಾಗಲೇ ನ್ಯಾಷನಲ್‌ ಕಾಂಗ್ರೆಸ್‌ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಈ ಮೈತ್ರಿಕೂಟದಿಂದ ಹೊರಗುಳಿಯುವ ಸೂಚನೆ ನೀಡಿದ್ದರು.

ಕಾಶ್ಮೀ​ರಕ್ಕೆ ವಿಶೇಷ ಸ್ಥಾನಮಾನ ನೀಡು​ವ 370ನೇ ವಿಧಿ ರದ್ದಾದಾಗ ಎಲ್ಲಾ ವಿಪಕ್ಷಗಳು ಸುಮ್ಮನಿದ್ದವು ಎಂದ ಒಮರ್‌, ಈಗ ವಿಪ​ಕ್ಷ​ಗ​ಳ ಕೂಟ​ವನ್ನು ಬೆಂಬ​ಲಿ​ಸದೇ ಇರುವ ಸುಳಿವು ನೀಡಿ​ದ್ದಾ​ರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!