ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದೇವದಾಸ್ ಎಂದು ಬಿಂಬಿಸುವ ಪೋಸ್ಟರ್‌ವೊಂದು ಪಾಟ್ನಾದಲ್ಲಿ ಕಾಣಿಸಿದ್ದು, ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
ಬಾಲಿವುಡ್‌ನ ಫೇಮಸ್ ಕ್ಯಾರೆಕ್ಟರ್ ದೇವದಾಸ್‌ಗೆ ರಾಹುಲ್ ಗಾಂಧಿ ಅವರನ್ನು ಹೋಲಿಸಿದ ಪೋಸ್ಟರ್ ಇದಾಗಿದೆ. ವೀರಚಂದ್ ಪಟೇಲ್ ಮಾರ್ಗದ ಬಿಜೆಪಿ ಕಚೇರಿಯ ಗೇಟ್‌ನಲ್ಲಿ ಈ ಪೋಸ್ಟರ್ ಕಾಣಸಿಗುತ್ತದೆ.
ಪೋಸ್ಟರ್‌ನ ಒಂದು ತುದಿಯಲ್ಲಿ ಶಾರುಖ್ ಖಾನ್ ಮತ್ತೊಂದು ತುದಿಯಲ್ಲಿ ರಾಹುಲ್ ಗಾಂಧಿ ಇದ್ದಾರೆ. ಬಾಬು ಜಿ ನೆ ಕಹಾ ಷರಾಬ್ ಚೋಡ್ ದೋ ಫೇಮಸ್ ಡೈಲಾಗ್‌ನ್ನು ರಾಹುಲ್ ಗಾಂಧಿ ಬಗ್ಗೆ ಹೇಳಲಾಗಿದೆ. ಮಮತಾ ದೀದಿನೆ ಕಹಾ ಬೆಂಗಾಲ್ ಚೋಡ್‌ದೋ, ಕೇಜ್ರಿವಾಲ್‌ನೆಕಹಾ ಪಂಜಾಬ್, ದೆಲ್ಲಿ ಚೋಡ್ ದೋ, ನಿತಿನ್ ನೆ ಕಹಾ ಬಿಹಾರ ಚೋಡ್‌ದೋ, ಅಖಿಲೇಷ್‌ನೆ ಕಹಾ ಯುಪಿ ಚೋಡ್‌ದೋ, ಸ್ಟಾಲಿನ್‌ನೆ ಕಹಾ ತಮಿಳುನಾಡು ಚೋಡ್ ದೋ, ವೋ ದಿನ್ ದೂರ್ ನಹಿ ಜಬ್ ಸಬ್ ಮಿಲ್ಕೆ ಕಹೇಂಗ್ ಕಾಂಗ್ರೆಸ್ ಔರ್ ರಾಜನೀತಿ ಚೋಡ್ ದೋ ಎಂದು ಬರೆಯಲಾಗಿದೆ.
ಒಬ್ಬೊಬ್ಬ ನಾಯಕ ಒಂದೊಂದು ಪ್ರದೇಶವನ್ನು ಬಿಡೋಕೆ ಹೇಳಿದ್ದಾರೆ. ಕಡೆಗೆ ಎಲ್ಲರೂ ಸೇರಿಕೊಂಡು ಕಾಂಗ್ರೆಸ್ ಹಾಗೂ ರಾಜಕೀಯವನ್ನೇ ಬಿಟ್ಟುಬಿಡೋಕೆ ಹೇಳ್ತೀರಿ ಎಂದು ಹೇಳಲಾಗಿದೆ.