ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಮ್ಯಾನೇಜರ್ ರಶ್ಮಿಕಾಗೆ ೮೦ ಲಕ್ಷ ರೂಪಾಯಿ ಪಂಗನಾಮ ಹಾಕಿ ಓಡಿಹೋಗಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಆದರೆ ರಶ್ಮಿಕಾ ಮಾತ್ರ ಈ ಬಗ್ಗೆ ಯಾವ ಸ್ಪಷ್ಟನೆಯನ್ನೂ ನೀಡಿರಲಿಲ್ಲ.
ಆದರೆ ಇದೀಗ ಸಾಕಷ್ಟು ಸುದ್ದಿಗಳು ವೈರಲ್ ಆದ ಹಿನ್ನೆಲೆ ರಶ್ಮಿಕಾ ದನಿಯೆತ್ತಿದ್ದು, ನನ್ನ ಮ್ಯಾನೇಜರ್ ಬಿಟ್ಟುಹೋಗಿರುವುದು ನಿಜ, ಹಣ ಎಗರಿಸಿದ್ದಾರೆ ಅನ್ನೋದೆಲ್ಲಾ ಸುಳ್ಳು, ಸೌಹಾರ್ದಯುತವಾಗಿ ನಿರ್ಧಾರ ತೆಗೆದುಕೊಂಡು ಇಬ್ಬರೂ ಬೇರೆ ಬೇರೆ ಆಗಿದ್ದೇವೆ ನಮ್ಮ ಮಧ್ಯೆ ಯಾವುದೇ ದ್ವೇಷ ಇಲ್ಲ. ಇಷ್ಟೇ ಸತ್ಯ ಉಳಿದಿದ್ದೆಲ್ಲವೂ ಊಹಾಪೋಹ ಅಷ್ಟೆ ಎಂದಿದ್ದಾರೆ.