ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಂದಗೋಳದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸ್‌ನಲ್ಲಿ ಮಹಿಳಾ ಕಂಡಕ್ಟರ್ ದರ್ಪ ತೋರಿದ್ದು, ವೃದ್ಧೆ ಕೆನ್ನೆಗೆ ಹೊಡೆದಿದ್ದಾರೆ.
ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ನೌಕರರು ಮಹಿಳಾ ಪ್ರಯಾಣಿಕರೊಂದಿಗೆ ಸೌಹಾರ್ದಯುತವಾಗಿ ವರ್ತಿಸುವಂತೆ ರಾಜ್ಯ ಸರ್ಕಾರ ಈ ಮೊದಲೇ ಸುತ್ತೋಲೆ ಹೊರಡಿಸಿದೆ. ಆದರೂ ಇಲ್ಲಿ ಮಹಿಳಾ ಕಂಡಕ್ಟರ್ ವಿತಂಡ ವರ್ತನೆ ತೋರಿದ್ದು, ನಿಂತಿರುವ ವೃದ್ಧೆ ಕೆನ್ನೆಗೆ ಬಾರಿಸಿದ್ದಾರೆ.
ಫೋಟೊಸ್ ಹಾಗೂ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದು, ಕಂಡಕ್ಟರ್ ನೌಕರಿಗೆ ಕುತ್ತು ಬರುವ ಸಾಧ್ಯತೆ ಇದೆ. ಅಜ್ಜಿ ಹಾಗೂ ಕಂಡಕ್ಟರ್ ನಡುವೆ ವಾದ ನಡೆಯುತ್ತದೆ, ಎರಡು ನಿಮಿಷದ ವಾದದ ನಂತರ ಅಜ್ಜಿ ಕೆನ್ನೆಗೆ ಹೊಡೆದು ಸುಮ್ನೆ ನಿಂತ್ಕೊ ಎಂದು ಕಂಡಕ್ಟರ್ ಕೂಗಿದ್ದಾರೆ. ಅಜ್ಜಿ ಕೆನ್ನೆಗೆ ಹೊಡೆದಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಜನರು ಅಜ್ಜಿ ಪರ ನಿಂತು ಕಂಡಕ್ಟರ್ ಜೊತೆ ಮಾತಿಗಿಳಿದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.