ರಾಮನಗರ ಹೆದ್ದಾರಿಯಲ್ಲಿ ಭರ್ಜರಿ ಬೇಟೆ, ಅಕ್ರಮ ಗೋವಾ ಮದ್ಯ ವಶ

ಹೊಸದಿಗಂತ ವರದಿ ಜೋಯಿಡಾ :

ಜೋಯಿಡಾ ತಾಲೂಕಿನ ರಾಮನಗರ ಪೋಲಿಸ್ ಠಾಣಾ ವ್ಯಾಪ್ತಿಯ ಗೋವಾ – ರಾಮನಗರ ಹೆದ್ದಾರಿಯಲ್ಲಿ ಬಿಸ್ಕೆಟ್ ಬಾಕ್ಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸಾವಿರಾರು ಬಾಟಲಿ ಮದ್ಯವನ್ನು ಜೋಯಿಡಾ ಸಿಪಿಐ ನಿತ್ಯಾನಂದ ಪಂಡಿತ್ ನೇತೃತ್ವದ ತಂಡ ಹಿಡಿದು ಪ್ರಕರಣ ದಾಖಲಿಸಿದ ಘಟನೆ ಇಂದು ಶುಕ್ರವಾರ ಬೆಳಗ್ಗೆ ನಡೆದಿದೆ.

ಅಶೋಕ ಲೈಲಂಡ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ತೆಲಂಗಾಣ ಮೂಲದ ಕೊತ್ತಪಲ್ಲಿ ನಾಗಶಾಲಿ ಸತ್ಯನಾರಾಯಣ ಆಚಾರಿ ಎಂಬಾತನನ್ನು ಬಂಧಿಸಲಾಗಿದ್ದು, ಸಾವಿರಾರು ಮಧ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ, ವಾಹನ ಮತ್ತು ಅಕ್ರಮ ಸಾರಾಯಿ ಸೇರಿ ಅಂದಾಜು 50 ಲಕ್ಷ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್, ದಾಂಡೇಲಿ ಡಿ.ವೈ ಎಸ್ ಪಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ಜೋಯಿಡಾ ಸಿಪಿಐ ನಿತ್ಯಾನಂದ ಪಂಡಿತ್ , ರಾಮನಗರ ಪಿಎಸ್.ಐ ಬಸವರಾಜ ಮಬನೂರ, ತನಿಖಾ ವಿಭಾಗದ ಪಿಎಸ್ ಐ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!