ಕಡಿಮೆ ಅವಧಿಯಲ್ಲಿ 13 ರಾಷ್ಟ್ರಗಳ ಅತ್ಯುನ್ನತ ನಾಗರೀಕ ಪ್ರಶಸ್ತಿ ಪಡೆದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಜಿಪ್ಟ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ಲಾ ಫತಾಹ್ ಅಲ್ ಸಿಸಿ, ತಮ್ಮ ದೇಶದ ಅತ್ಯುನ್ನತ ನಾಗರೀಕ ನೈಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಇದು ಮೋದಿ ಸ್ವೀಕರಿಸಿದ 13ನೇ ಅಂತಾರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿಯಾಗಿದೆ.

ಈ ಹಿಂದೆ ಸೌದಿ ಅರೇಬಿಯಾ, ಅಮರಿಕ ಸೇರಿದಂತೆ ಹಲವು ರಾಷ್ಟ್ರಗಳು ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರೀಕರ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಧಾನಿ ಮೋದಿ ಅವರು 9 ವರ್ಷದಲ್ಲಿ ಮೋದಿ 13 ಅಂತಾರಾಷ್ಟ್ರೀಯ ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ. ಕಡಿಮೆ ಅವಧಿಯಲ್ಲಿ ಗರಿಷ್ಠ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ಪಪುವಾ ನ್ಯೂಗಿನಿಯಾ ದೇಶಕ್ಕೆ ಭೇಟಿ ನೀಡಿದ್ದ ವೇಳೆ ಪೆಸಿಫಿಕ್ ದ್ವೀಪ ರಾಷ್ಟ್ರಗ ಏಕತೆ ಹಾಗೂ ಜಾಗತಿಕವಾಗಿ ದಕ್ಷಿಣ ದ್ವೀಪ ರಾಷ್ಟ್ರಗಳ ಒಕ್ಕೂಟ ಮುನ್ನಡೆಸಿದ ಕಾರಣಕ್ಕೆ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗುಹು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದು ಪಪುವಾ ನ್ಯೂಗಿನಿಯಾ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿದೆ.

ಬಳಿಕ 2023ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿಯ ವಿಶ್ವನಾಯಕತ್ವವನ್ನು ಗುರುತಿಸಿ ಫಿಜಿ ದೇಶ ತಮ್ಮ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಕಂಪಾನಿಯನ್ ಆಫ್ ದಿ ಆರ್ಡರ್ ಆಫ್ ಫಿಚಿ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪ್ರಧಾನಿಯಾದ ಅವಧಿಯಲ್ಲಿ ಪಡೆದ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ…

  • ಈಜಿಪ್ಟ್: ಆರ್ಡರ್ ಆಫ್ ದಿ ನೈಲ್– 2023ರಲ್ಲಿ ಪ್ರಧಾನಿ ಮೋದಿಗೆ ಸಿಕ್ಕಿದೆ.
  • ಪಪುವಾ ನ್ಯೂಗಿನಿಯಾ: ಕಂಪೇನಿಯನ್ ಆಫ್ ದಿ ಆರ್ಡರ್ ಆಫ್ ಲೋಗೋಹು– ಇದು ಆ ದೇಶದ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾಗಿದೆ. ಪೆಸಿಫಿಕ್ ಐಲ್ಯಾಂಡ್ ದೇಶಗಳ ಒಗ್ಗಟ್ಟಿಗೆ ಕಾರಣರಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2023 ಮೇ ತಿಂಗಳಲ್ಲಿ ಈ ಪ್ರಶಸ್ತಿ ಸಿಕ್ಕಿತ್ತು.
  • ಫಿಜಿ: ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ– 2023 ಮೇ ತಿಂಗಳಲ್ಲಿ ಮೋದಿಗೆ ಈ ಗೌರವ ಸಿಕ್ಕಿತು. ಮೋದಿ ಅವರ ಜಾಗತಿಕ ನಾಯಕತ್ವಕ್ಕೆ ಗೌರವವಾಗಿ ಫಿಜಿ ಅತ್ಯುನ್ನತ ಗೌರವ ಪ್ರಶಸ್ತಿ ಸಿಕ್ಕಿತು.
  • ರಿಪಬ್ಲಿಕ್ ಆಫ್ ಪಲೋ: ಎಬಕಲ್ ಅವಾರ್ಡ್– ಇದೂ ಕೂಡ 2023 ಮೇ ತಿಂಗಳಲ್ಲಿ ಮೋದಿಗೆ ಸಿಕ್ಕಿದೆ. ಪಪುವಾ ನ್ಯೂಗಿನಿಯಾ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಿಪಬ್ಲಿಕ್ ಆಫ್ ಪಲೋನ ಅಧ್ಯಕ್ಷ ಸುರೇಂಜಲ್ ಎಸ್ ವಿಪ್ಸ್ ಜೂನಿಯರ್ ಅವರು ಮೋದಿಗೆ ಈ ಪ್ರಶಸ್ತಿ ನೀಡಿದರು.
  • ಆರ್ಡರ್ ಆಫ್ ಡ್ರುಕ್ ಗ್ಯಾಲ್​ಪೋ: ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು 2021 ಡಿಸೆಂಬರ್​ನಲ್ಲಿ ಮೋದಿಗೆ ಕೊಡಲಾಯಿತು.
  • ಅಮೆರಿಕ: ಲೆಜಿಯನ್ ಆಫ್ ಮೆರಿಟ್: ಇದನ್ನು ಅಸಾಧಾರಣ ಸಾಧನೆ ಮತ್ತು ಸೇವೆಗಳನ್ನು ಗುರುತಿಸಿ ಅಮೆರಿಕದ ಸಶಸ್ತ್ರ ಪಡೆ ಕೊಡುವ ಗೌರವವಾಗಿದೆ. 2020ರಲ್ಲಿ ಮೋದಿಗೆ ಇಂಥದ್ದೊಂದು ಅಪೂರ್ವ ಪ್ರಶಸ್ತಿ ಸಿಕ್ಕಿತ್ತು.
  • ಬಹರೇನ್: ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್: 2019ರಲ್ಲಿ
  • ಮಾಲ್ಡೀವ್ಸ್: ಆರ್ಡರ್ ಆಫ್ ದಿ ಡಿಸ್ಟಿಂಗ್ಯುಶ್ಡ್ ರೂಲ್ ಅಫ್ ನಿಶಾನ್ ಇಜ್ಜುದ್ದೀನ್– ಇದು ವಿದೇಶೀ ಗಣ್ಯರಿಗೆ ಕೊಡಗುವ ಅತ್ಯುನ್ನತ ಗೌರವವಾಗಿದೆ. ಮೋದಿಗೆ 2019ರಲ್ಲಿ ಇದು ದೊರಕಿದೆ.
  • ರಷ್ಯಾ: ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಅವಾರ್ಡ್– ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಇದು 2019ರಲ್ಲಿ ಮೋದಿಗೆ ಸಿಕ್ಕಿದೆ.
  • ಯುಎಇ: ಆರ್ಡರ್ ಆಫ್ ಝಾಯೆದ್ ಅವಾರ್ಡ್– ಸಂಯುಕ್ತ ಅರಬ್ ಸಂಸ್ಥಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ 2019ರಲ್ಲಿ ಮೋದಿ ಅವರಿಗೆ ಲಭಿಸಿದೆ.
  • ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲಸ್ಟೀನ್ ಅವಾರ್ಡ್: 2018ರಲ್ಲಿ ಮೋದಿಗೆ ಇದು ಸಿಕ್ಕಿತು. ವಿದೇಶೀ ಗಣ್ಯರಿಗೆ ಪ್ಯಾಲಸ್ಟೀನ್ ದೇಶ ನೀಡುವ ಅತ್ಯುಚ್ಚ ಪ್ರಶಸ್ತಿ ಇದು.
  • ಅಫ್ಘಾನಿಸ್ತಾನ: ಸ್ಟೇಟ್ ಆರ್ಡರ್ ಆಫ್ ಘಾಜಿ ಆಮಿರ್ ಅಮಾನುಲ್ಲಾ ಖಾನ್– 2016ರಲ್ಲಿ ಅಫ್ಘಾನಿಸ್ತಾನದ ಈ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಧಾನಿ ಮೋದಿಗೆ ದೊರಕಿತು.
  • ಸೌದಿ ಅರೇಬಿಯಾ: ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್– 2016ರಲ್ಲಿ ಸೌದಿ ಅರೇಬಿಯಾದ ಮುಸ್ಲಿಮೇತರರಿಗೆ ಕೊಡಲಾಗುವ ಅತ್ಯುನ್ನತ ಗೌರವ ಮೋದಿಗೆ ಸಿಕ್ಕಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!