ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ರಷ್ಯಾ ನಡುವಿನ ಭೀಕರ ಕದನ ಇನ್ನೂ ನಿರಂತರ ನಡೆಯುತ್ತಿದ್ದು, ಇದರ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ರಷ್ಯಾ (Russia) ಪರ ಉಕ್ರೇನ್ನಲ್ಲಿ ಹೋರಾಡುತ್ತಿದ್ದ ರಷ್ಯಾದ ಬಾಡಿಗೆ ಸೈನ್ಯ ವ್ಯಾಗ್ನಾರ್ (Wagner Army) ರಷ್ಯಾದ ನಾಯಕತ್ವದ ವಿರುದ್ಧವೇ ತಿರುಗಿ ಬಿದ್ದಿತ್ತು. ನಿನ್ನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಅಧಿಕಾರ ಕಿತ್ತುಕೊಳ್ಳುತ್ತೇನೆ ಎಂದು ರಷ್ಯಾದ ರೊಸ್ಟೋವ್ ನಗರಕ್ಕೆ ನುಗ್ಗಿತ್ತು.
ಆದ್ರೆ ಇಂದು ವ್ಯಾಗ್ನಾರ್ ದಂಡನಾಯಕ ಯೆವ್ಗಿನಿ ಪ್ರಿಗೋಝಿನ್ ಸಿಟ್ಟು ತಣ್ಣಗಾಗಿದೆ. ರಷ್ಯಾ ಮಿಲಿಟರಿ ಪ್ರಧಾನ ಕಚೇರಿ ಇರುವ ರೋಸ್ತೋವ್ ನಗರವನ್ನು ವಶಕ್ಕೆ ಪಡೆದು ರಾಜಧಾನಿ ಮಾಸ್ಕೋ ಕಡೆ ಹೊರಟ್ಟಿದ್ದ ವಾಗ್ನರ್ ಪಡೆ ದಂಗೆಯಿಂದ ಹಿಂದೆ ಸರಿಯಲು ಒಪ್ಪಿಕೊಂಡಿದೆ.
ಶನಿವಾರ ಬೆಳಗ್ಗೆ ವಿಡಿಯೋ ಹೇಳಿಕೆಯಲ್ಲಿ ಪ್ರಿಗೋಝಿನ್ ರೊಸ್ತೋವ್ ನಗರವನ್ನು ವಶಕ್ಕೆಪಡೆಯಲಾಗಿದೆ. ರಷ್ಯಾ ನಾಯಕತ್ವವನ್ನು ಕೆಳಗಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ವ್ಯಾಗ್ನಾರ್ ಪಡೆ ರೊಸ್ತೊವ್ ನಗರದಿಂದ 1100 ಕಿ.ಮೀ ದೂರದಲ್ಲಿದ್ದ ರಾಜಧಾನಿ ಮಾಸ್ಕೋ ಕಡೆ ಹೊರಟಿತ್ತು. ಆದರೆ ಈಗ ಹೊಸ ಆಡಿಯೋ ಸಂದೇಶದಲ್ಲಿ, ರಷ್ಯಾದಲ್ಲಿ ರಕ್ತಪಾತದ ಅಪಾಯವನ್ನು ತಡೆಗಟ್ಟುವ ಉದ್ದೇಶದಿಂದ ವಾಗ್ನರ್ ಪಡೆ ತಮ್ಮ ನೆಲೆಗಳಿಗೆ ಹಿಂದಿರುಗುತ್ತದೆ ಎಂದು ಪ್ರಿಗೋಜಿನ್ ಹೇಳಿದ್ದಾರೆ.
ಇನ್ನು ರಷ್ಯಾದಲ್ಲಿ ದಂಗೆ ಎದ್ದಿದ್ದ ವಾಗ್ನರ್ ಪಡೆಯನ್ನು ಬೆಲರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮಧ್ಯಸ್ಥಿಕೆ ವಹಿಸಿ ಶಮನ ಮಾಡಿದ್ದಾರೆ. ವ್ಯಾಗ್ನಾರ್ ದಂಡನಾಯಕ ಪ್ರಿಗೋಝಿನ್ ಮನವೊಲಿಸುವಲ್ಲಿ ಅಲೆಗ್ಸಾಂಡರ್ ಯಶಸ್ವಿಯಾಗಿದ್ದಾರೆ. ಇದರಿಂದ ಅವರು ಯುದ್ದದಿಂದ ಹಿಂದೆ ಸರಿದಿದ್ದಾರೆ.
ಪ್ರಿಗೋಝಿನ್ ಜೊತೆ ಆಗಿರುವ ಮಾತುಕತೆ ಒಪ್ಪಂದವನ್ನು ರಷ್ಯಾ ಸರ್ಕಾರ ಖಚಿತಪಡಿಸಿದ್ದು, ಒಪ್ಪಂದದ ಪ್ರಕಾರ, ಪ್ರಿಗೋಝಿನ್ ವಿರುದ್ಧ ಎಲ್ಲ ಅಪರಾಧಗಳನ್ನು ಕೈಬಿಡುವುದಾಗಿ ರಷ್ಯಾ ಸರಕಾರ ಹೇಳಿದೆ. ಜೊತೆಗೆ ಪ್ರಿಗೋಝಿನ್ ಬೆಲರಸ್ಗೆ ವಾಪಾಸ್ ಹೋಗಲಿದ್ದಾರೆ.ಇದರಿಂದ ರಷ್ಯಾ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.