ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದಲ್ಲಿ ಎಕ್ಸ್‌ಪ್ರೆಸ್ ಬಸ್‌ನ್ನು ಡ್ರೈವರ್ ನಿಲ್ಲಿಸಿಲ್ಲ ಎನ್ನುವ ಕೋಪಕ್ಕೆ ಬಸ್‌ಗೆ ಕಲ್ಲೆಸೆದ ಮಹಿಳೆಗೆ ಐದು ಸಾವಿರ ರೂಪಾಯಿ ದಂದ ವಿಧಿಸಲಾಗಿದೆ.
ಕೊಪ್ಪಳದ ಹೊಸಲಿಂಗಾಪುರ ಬಳಿ ಬಸ್ ನಿಲ್ಲಿಸದ ಕೋಪಕ್ಕೆ ಲಕ್ಷ್ಮೀ ಎಂಬಾಕೆ ಕಲ್ಲು ತೂರಿದಾರೆ. ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ. ಹೊಸಪೇಟೆಯಿಂದ ತನ್ನ ಊರಿಗೆ ತೆರಳಲು ಬಸ್ ಗಾಗಿ ಕಾದು ಕುಳಿತಿದ್ದರು. ಯಾವುದೇ ಬಸ್ ನಿಲ್ಲಿಸದಿರುವ ಬಗ್ಗೆ ಅಸಮಾಧಾನಗೊಂಡು ಬಸ್ ಗೆ ಕಲ್ಲು ತೂರಿದ್ದಾಳೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಲು ಎಸೆತದಿಂದ ಬಸ್ ಗ್ಲಾಸ್ ಪುಡಿಪುಡಿಯಾಗಿದ್ದು, ಐದು ಸಾವಿರ ರೂಪಾಯಿ ಪಾವತಿ ಮಾಡುವಂತೆ ಡಿಪೋ ಮ್ಯಾನೇಜರ್ ಹೇಳಿದ್ದಾರೆ. ಇಲ್ಲವಾದರೆ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದ್ದು, ಮಹಿಳೆ ಕ್ಷಮೆ ಕೇಳಿ ಐದು ಸಾವಿರ ರೂಪಾಯಿ ನೀಡಿದ್ದಾರೆ.