ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕೆ ಹೆಸರು ಮಂಗಿಬಾಯಿ ತನ್ವಾರ್, ವಯಸ್ಸು ಸರಾಸರಿ 100 ವರ್ಷಗಳು. ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ವಾಸವಾಗಿರುವ ಆಕೆಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ತುಂಬಾ ಇಷ್ಟ. ಯಾಕೆ ಎಂದು ಕೇಳಿದರೆ ಮೋದಿ ದೇಶಕ್ಕೆ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಅವರು ನನ್ನ ಮಗನಿದ್ದಂತೆ ಎಂದು ತಮ್ಮ ಪ್ರೀತಿಯನ್ನು ಹೊರಹಾಕಿದ್ದಾರೆ. ಅಷ್ಟೇ ಅಲ್ಲ ತನ್ನ ಬಳಿಯಿರುವ 25 ಎಕರೆ ಭೂಮಿಯನ್ನು ಮೋದಿಗೆ ಕೊಡುವುದಾಗಿ ಹೇಳಿದ್ದಾರೆ.
ಯಾಕೆ ಮಂಗಿಬಾಯಿಗೆ ಮಕ್ಕಳಿಲ್ಲವೇ? ಅಂತ ಪ್ರಶ್ನೆ ಬರಬಹುದು ಖಂಡಿತಾ, ಆಕೆಗೆ ಒಂದಲ್ಲ ಎರಡಲ್ಲ 14 ಮಕ್ಕಳಿದ್ದಾರೆ. ಆದರೂ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ನನ್ನ 15ನೇ ಮಗ ಎಂದು ಪರಿಗಣಿಸುತ್ತೇನೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಮೇಲಾಗಿ ತನ್ನ ಮಕ್ಕಳಿಗಿಲ್ಲಿದ್ದರೂ ಸರಿ ತಮ್ಮ 25 ಎಕರೆ ಜಮೀನು ಮೋದಿಗೆ ಬರೆದುಕೊಡುವುದಾಗಿ ಆ ಅಜ್ಜಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಷ್ಟೇ ಅಲ್ಲದೆ ʻನಾನು ಮೋದಿಯನ್ನು ಟಿವಿಯಲ್ಲಿ ಹಲವು ಬಾರಿ ನೋಡಿದ್ದೇನೆ. ಮೋದಿ ನನಗೆ ಮನೆ ಕೊಟ್ಟರು. ವೈದ್ಯಕೀಯ ಸೇವೆ ನೀಡುತ್ತಿದ್ದಾರೆ, ಪಿಂಚಣಿ ಬರುತ್ತಿದೆ ಎಂದು ಪ್ರಶಂಸೆಯ ಸುರಿಮಳೆಗೈದರು. ಆ ಹಣವನ್ನೆಲ್ಲಾ ಕೊಟ್ಟಿದ್ದರಿಂದ ತೀರ್ಥಯಾತ್ರೆಗೆ ತೆರಳಲು ಸಾಧ್ಯವಾಯಿತುʼ ಎಂದರು.
ಇಂದು ಪ್ರಧಾನಿ ಮೋದಿ ಮಧ್ಯಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅದೇ ಸಮಯದಲ್ಲಿ, ಮಂಗಿಬಾಯಿ ಅವರ ವೀಡಿಯೊ ವೈರಲ್ ಆಗಿರುವುದು ಗಮನಿಸಬೇಕಾದ ಸಂಗತಿ. ಅವಕಾಶ ಸಿಕ್ಕರೆ ಸ್ವತಃ ಮೋದಿಯವರನ್ನು ಭೇಟಿ ಮಾಡುವುದಾಗಿ ಮಂಗಿಬಾಯಿ ಹೇಳಿದ್ದಾರೆ.