SHOCKING| ಅಬ್ಬಬ್ಬಾ…ಈ ಮೇಕೆಯ ಬೆಲೆ, ಅದರ ತೂಕ ಎಷ್ಟಿದೆ ಅಂತ ಕೇಳಿದ್ರಾ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಒಂದು ಮೇಕೆ ಬೆಲೆ ಎಷ್ಟಿರಬಹುದು? ಅಬ್ಬಬ್ಬಾ ಅಂದ್ರೆ ಹತ್ತು ಸಾವಿರ..ಇಪ್ಪತ್ತು ಸಾವಿರ? ಆದರೆ, ಈ ಆಡಿನ ಬೆಲೆ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರೆಂಟಿ. ಈ ಮೇಕೆಯ ಬೆಲೆ ಅಕ್ಷರಶಃ ರೂ.12 ಲಕ್ಷ ರೂಪಾಯಿ. ನಿಮಗೆ ಶಾಕ್‌ ಆದ್ರೋ ಇದೇ ನಿಜ.  ಈ ಮೇಕೆ ಕೋಟಾ ತಳಿಗೆ ಸೇರಿದೆ. ಅದರ ಹೆಸರು ‘ರಾಜ’. ಮಾಲೀಕರು ಅದನ್ನು ಸಾಕಿದ ಪರಿ ಹೇಗಿತ್ತೆಂದರೆ  ತೂಕ ಹಾಕಿದ್ರೆ 176 ಕೆಜಿಗ ತೂಗುವಷ್ಟಿದೆ.

ಮಧ್ಯಪ್ರದೇಶದಲ್ಲಿ ಈ ಕೋಟಾ ಮೇಕೆಯನ್ನು 12 ಲಕ್ಷಕ್ಕೆ ಮಾರಾಟ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಇಂದೋರ್ ನ ಸುಹೇಲ್ ಅಹಮದ್ ಎಂಬ ವ್ಯಕ್ತಿ ಎಂಟು ತಿಂಗಳ ಹಿಂದೆ ರಾಜಸ್ಥಾನದಲ್ಲಿ ಈ ಕೋಟಾ ತಳಿಯ ಮೇಕೆಯನ್ನು ಖರೀದಿಸಿದ್ದರು. ಈ ಮೇಕೆಗೆ ಬಲವಾದ ಆಹಾರವನ್ನು ಕೊಟ್ಟು ಚೆನ್ನಾಗಿ ಸಾಕಿದ್ದಾರೆ. ಒಳ್ಳೆಯ ಊಟ ಬಡಿಸುವುದಲ್ಲದೆ ಅದಕ್ಕಾಗಿ ವಿಶೇಷ ಸೌಕರ್ಯಗಳನ್ನೂ ಏರ್ಪಡಿಸಿದ್ದರಂತೆ.

ಕಡಲೆಬೀಜ, ಗೋಧಿ, ಹಾಲು, ಖರ್ಜೂರ ಇತ್ಯಾದಿ ಆಹಾರವನ್ನು ಪ್ರತಿನಿತ್ಯ ನೀಡುತ್ತಿದ್ದರು. ಈ ಮೇಕೆಗೆ ಬೇಸಿಗೆಯ ಬಿಸಿಗೆ ತೊಂದರೆಯಾಗದಂತೆ ಕೂಲರ್‌ಗಳನ್ನು ಕೂಡ ಅಳವಡಿಸಿದರು. ಇದೀಗ ಈ ಮೇಕೆಯನ್ನು ಮುಂಬೈನ ವ್ಯಕ್ತಿಯೊಬ್ಬರು 12 ಲಕ್ಷ ರೂ.ಗೆ ಖರೀದಿಸಿದ್ದಾರೆ. ಕೊಂಡು ತಂದಿದ್ದಕ್ಕೂ ಉತ್ತಮ ಲಾಭ ತಂದುಕೊಟ್ಟಿದೆ ಎಂದು ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!