ಅಭಿವೃದ್ಧಿಯಲ್ಲಿ ವೇಗ: ವಿಶ್ವದಲ್ಲೇ 2ನೇ ಅತಿದೊಡ್ಡದು ಭಾರತದ ರಸ್ತೆಜಾಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದು 9 ವರ್ಷಗಳು ಪೂರ್ಣಗೊಂಡಿದ್ದು, ಈ ಕ್ಷಣ ಕೇಂದ್ರ ಸರ್ಕಾರ ಕೈಗೊಂಡಿರುವ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ರಸ್ತೆ ಅಭಿವೃದ್ಧಿ ಕೂಡ ಒಂದು.

ಇಂದು ಭಾರತದ ರಸ್ತೆ ಜಾಲ ವಿಶ್ವದಲ್ಲೇ ಎತ್ತರಕ್ಕೆ ಬೆಳೆದಿದ್ದು, ವಿಶ್ವದ 2ನೇ ಅತಿದೊಡ್ಡ ರಸ್ತೆಜಾಲವಾಗಿ ಗುರುತಿಸಿಕೊಂಡಿದೆ.
ಈ ಕುರಿತು ಸ್ವತಃ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಖುಷಿ ಹಂಚಿಕೊಂಡಿದ್ದು, ಕಳೆದ 9 ವರ್ಷಗಳಲ್ಲಿ ದೇಶದ ರಸ್ತೆ ಜಾಲ ಶೇ. 59ರಷ್ಟು ಏರಿಕೆ ಕಂಡಿದೆ ಎಂದು ಮಂಗಳವಾರ ಹೇಳಿದ್ದಾರೆ.

ಸಚಿವರು ನೀಡಿರುವ ಮಾಹಿತಿಯ ಪ್ರಕಾರ, 2013-14ರಲ್ಲಿ ದೇಶದಲ್ಲಿ ಒಟ್ಟು 91,287 ಕಿಲೋಮೀಟರ್‌ ರಸ್ತೆ ಜಾಲಗಳಿತ್ತು. ಇಂದು ಭಾರತದ ರಸ್ತೆ ಜಾಲ 1, 45, 240 ಕಿಲೋಮೀಟರ್‌ ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರ ರಾಜಧಾನಿದೆಹಲಿಯಲ್ಲಿ ನಡೆದ ‘ಸರ್ಕಾರದ 9 ವರ್ಷಗಳ ಸಾಧನೆ’ ಕುರಿತ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತವು ಸುಮಾರು 64 ಲಕ್ಷ ಕಿಮೀ ಒಟ್ಟು ರಸ್ತೆ ಜಾಲವನ್ನು ಹೊಂದಿದೆ, ಇದು ವಿಶ್ವದಲ್ಲೇ ಎರಡನೇ ಅತಿ ದೊಡ್ಡದಾಗಿದೆ.ಕಳೆದ ಒಂಬತ್ತು ವರ್ಷಗಳಲ್ಲಿ ಭಾರತವು ಈ ವಲಯದಲ್ಲಿ ಏಳು ವಿಶ್ವ ದಾಖಲೆಗಳನ್ನು ಮಾಡಿದೆ. ಭಾರತದ ರಸ್ತೆ ಜಾಲವು ಯುಎಸ್ ನಂತರ ವಿಶ್ವದ ಎರಡನೇ ಅತಿ ದೊಡ್ಡದಾಗಿದೆಎಂದು ಅವರು ಹೇಳಿದರು.

2013-14ರಲ್ಲಿ 4,770 ಕೋಟಿ ರೂಪಾಯಿಗಳಿಂದ ಟೋಲ್‌ ಆದಾಯ ಈಗ 41,342 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. 2020 ರ ವೇಳೆಗೆ ಟೋಲ್ ಆದಾಯವನ್ನು 1,30,000 ಕೋಟಿಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಗಡ್ಕರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!