ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದ ಸಾಗರದ ಚೆನ್ನಕೊಪ್ಪ ಗ್ರಾಮದಲ್ಲಿ ಮಕ್ಕಳ ಮದುವೆಗೆ ಹೊರಟಿದ್ದ ತಂದೆಗೆ ಕಾರ್ ಡಿಕ್ಕಿಯಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಂಜುನಾಥ್ ಗೌಡ ಅವರ ಪತ್ನಿ ಮೂರು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ತಾಯಿಯಲ್ಲದೆ ಇಬ್ಬರು ಹೆಣ್ಣುಮಕ್ಕಳನ್ನು ಸಾಕಲು ಕಷ್ಟವಾಗಬಹುದು ಎಂದು ಹೆಣ್ಣುಮಕ್ಕಳ ಅಜ್ಜ ಅಜ್ಜಿ ಅವರನ್ನು ಓದಿಸುತ್ತಿದ್ದರು.
ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಎಲ್ಲ ಸಿದ್ಧತೆಯಾಗಿದ್ದು, ಮಕ್ಕಳ ಮದುವೆಗಾಗಿ ತಂದೆ ಊರಿನಿಂದ ಅಜ್ಜನ ಮನೆಗೆ ಹೊರಟಿದ್ದರು. ಈ ವೇಳೆ ರಸ್ತೆ ದಾಟುವಾಗ ಸ್ವಿಫ್ಟ್ ಕಾರ್ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿಯಿಲ್ಲದೇ ಮೊದಲೇ ನೊಂದಿದ್ದ ಮಕ್ಕಳು ತಂದೆಯನ್ನೂ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದಾರೆ.
ಮಕ್ಕಳ ಮದುವೆ ನೋಡುವ ಆಸೆಯಿಂದ ಹೊರಟಿದ್ದ ತಂದೆ ಕಾಣದ ಲೋಕಕ್ಕೆ ಹೊರಟಿದ್ದು, ಮಕ್ಕಳಿಗೆ ಸಿಡಿಲು ಬಡಿದಂತಾಗಿದೆ. ಮದುವೆ ಮನೆಯಲ್ಲಿ ಸ್ಮಶಾನ ಮೌನ ಎದುರಾಗಿದೆ.