ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸಂಸದ ಹಾಗೂ ನಟ ರವಿ ಕಿಶನ್ ಪುತ್ರಿ ಇಶಿತಾ ಶುಕ್ಲಾ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ. ರಕ್ಷಣಾ ಸಚಿವಾಲಯದ ‘ಅಗ್ನಿವೀರ್’ ಯೋಜನೆಯಡಿ 21ವರ್ಷದ ಇಶಿತಾ ರಕ್ಷಣಾ ಪಡೆಗೆ ಸೇರ್ಪಡೆಯಾದರು.
ಈ ವರ್ಷದ ಆರಂಭದಲ್ಲಿ ರವಿಕಿಶನ್ ತಮ್ಮ ಮಗಳು ರಕ್ಷಣಾ ಪಡೆಗೆ ಸೇರುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅದರಂತೆಯೇ ತಮ್ಮ ಮಗಳು ರಕ್ಷಣಾ ಪಡೆಯ ಭಾಗವಾಗಿದ್ದಾಳೆ ಎಂದು ಟ್ವೀಟ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿರು.
ದೆಹಲಿ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಓದುತ್ತಿದ್ದ ಇಶಿತಾ ಎನ್ಸಿಸಿಯಲ್ಲಿ ಕೆಡೆಟ್ ಆಗಿದ್ದಾರೆ. ಆಕೆಗೆ 2022 ರಲ್ಲಿ NCC ADG ಅವಾರ್ಡ್ ಆಫ್ ಎಕ್ಸಲೆನ್ಸ್ ನೀಡಲಾಯಿತು. ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಅತ್ಯುತ್ತಮ ಕೆಡೆಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಇಶಿತಾ ಇನ್ಸ್ಟಾದಲ್ಲಿನ ಅನೇಕ ಪೋಸ್ಟ್ಗಳು ರಾಷ್ಟ್ರದ ಸೇವೆಯತ್ತ ಅವರ ಉತ್ಸಾಹ ಮತ್ತು ಸಮರ್ಪಣೆಯನ್ನು ತೋರಿಸುತ್ತವೆ. ಇದರೊಂದಿಗೆ ನೆಟ್ಟಿಗರು ಇಶಿತಾ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.