ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಲೋಕಸಭೆಯತ್ತ ಚಿತ್ತ ಹರಿಸಿರುವ ಬಿಜೆಪಿ ಈಗಾಗಲೇ ಮತ್ತೆ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದ್ದು, ಇದೀಗ ರಾಜ್ಯಧ್ಯಕ್ಷರ ಬದಲಾವಣೆ ಮಾಡಿದ್ದಾರೆ.
ತೆಲಂಗಾಣ, ಪಂಜಾಬ್ ಸೇರಿದಂತೆ 4 ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ಘೋಷಣೆ ಮಾಡಲಾಗಿದೆ.
ಬಿಜೆಪಿಯ ತೆಲಂಗಾಣ ನೂತನ ರಾಜ್ಯಾಧ್ಯಕ್ಷರಾಗಿ ಜಿ ಕಿಶನ್ ರೆಡ್ಡಿ ಆಯ್ಕೆಯಾಗಿದ್ದಾರೆ. ಇತ್ತ ಆಂಧ್ರ ಪ್ರದೇಶಕ್ಕೆ ಪುರಂದೇಶ್ವರಿ ಆಯ್ಕೆಯಾಗಿದ್ದರೆ, ಪಂಜಾಬ್‌ನಲ್ಲಿ ಬಿಜೆಪಿ ಸಾರಥ್ಯ ಸುನಿಲ್ ಜಖಾರ್ ಹೆಗಲೇರಿದೆ. ಇನ್ನು ಜಾರ್ಖಂಡ್‌ನಲ್ಲಿ ಬಬುಲಾ ಮರಂಡಿ ನೂತನ ಬಿಜೆಪಿ ರಾಜ್ಯಾಧ್ಕ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೇಂದ್ರ ಸಚಿವರಾಗಿದ್ದ ಜಿ ಕಿಶನ್ ರೆಡ್ಡಿಯನ್ನು ಮುಂಬರುವ ಚುನಾವಣೆ ದೃಷ್ಟಿಯಿಂದ ಪಕ್ಷದ ಕೆಲಸಕ್ಕೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಜಿ ಕಿಶನ್ ರೆಡ್ಡಿಗೆ ತೆಲಂಗಾಣ ಬಿಜೆಪಿ ಸಾರಥ್ಯ ನೀಡಲಾಗಿದೆ.
ಕಾಂಗ್ರೆಸ್ ನಿಂದ ಬಿಜೆಪಿ ಸೇರಿಕೊಂಡಿದ್ದ ಸುನಿಲ್ ಜಖಾರ್‌ಗೆ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನ ನೀಡಲಾಗಿದೆ. ಈ ಮೂಲಕ ಪಂಜಾಬ್‌ನಲ್ಲಿ ಪಕ್ಷವನ್ನು ಬಲಪಡಿಸಲು ಹೈಕಮಾಂಡ್ ನಿರ್ಧರಿಸಿದೆ.
ಆಂಧ್ರ ಪ್ರದೇಶದ ಬಿಜೆಪಿ ನಾಯಕಿ ಪುರಂದೇಶ್ವರಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ. ಮಾಜಿ ಕೇಂದ್ರ ಸಚಿವೆಯಾಗಿ ಸೇವೆ ಸಲ್ಲಿಸಿರುವ ಪುರಂದೇಶ್ವರಿ ಇದೀಗ ಆಂಧ್ರದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.