ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸರ್ಕಾರ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳನ್ನು ನಿಷೇಧಿಸಲು ಜಾರಿಗೆ ತಂದಿರುವ ಕಾನೂನು ಪ್ರಶ್ನಿಸಿ ಗೇಮಿಂಗ್ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ (Madras High Court) ನಡೆಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಪಿ.ಡಿ ಆದಿಕೇಶವಲು ಅವರ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು,ಈ ವೇಳೆ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ.
ಮಧ್ಯಂತರ ತಡೆಗೆ ಮಾಡುವ ವಾದ ಮತ್ತು ಅಂತಿಮ ವಿಚಾರಣೆಗೆ ಮಾಡುವ ವಾದ ಒಂದೇಯಾಗಿರುತ್ತದೆ. ಈ ಹಿನ್ನಲೆ ಮಧ್ಯಂತರ ತಡೆ ಬದಲು ನಾವು ಅಂತಿಮ ವಾದಕ್ಕೆ ಪ್ರಕರಣವನ್ನು ಪೋಸ್ಟ್ ಮಾಡುತ್ತಿದ್ದೇವೆ. ಜುಲೈ 13 ರಂದು ಅಂತಿಮ ವಾದವನ್ನು ಆಲಿಸುವುದಾಗಿ ಕೋರ್ಟ್ ಹೇಳಿತು.
ರಮ್ಮಿ ಮತ್ತು ಪೋಕರ್‌ನಂತಹ ಆಟಗಳು ಕೌಶಲ್ಯದ ಆಟಗಳಲ್ಲ ಮತ್ತು ಅವಕಾಶದ ಆಟಗಳಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ, ಅರ್ಜಿದಾರ ಕಂಪನಿಗಳು ಬಲವಂತದ ಕ್ರಿಮಿನಲ್ ಕ್ರಮದ ಬೆದರಿಕೆಯನ್ನು ಎದುರಿಸುತ್ತಿವೆ ಎಂದು ಇದೇ ವೇಳೆ ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.