ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ಸೂಪರ್ ಹಿಟ್ ಸಿನಿಮಾಗಳು ರೀ ರಿಲೀಸ್ ಆಗುತ್ತಿರುವುದು ಇದೇ ಮೊದಲೇನಲ್ಲ. ಇದೀಗ ಮತ್ತೆರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ನಂದಮೂರಿ ನಟಸಿಂಹ ಬಾಲಕೃಷ್ಣ ಹಾಗೂ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅಭಿನಯದ ಆಕ್ಷನ್ ಅಡ್ವೆಂಚರ್ ಫ್ಯಾಂಟಸಿ ಡ್ರಾಮಾ ಸಿನಿಮಾ ‘ಭೈರವ ದ್ವೀಪಂ’. ಅಂದು ಬ್ಲಾಕ್ ಬಸ್ಟರ್ ಸಕ್ಸಸ್ ಕಂಡ ಈ ಸಿನಿಮಾ ಮತ್ತೊಮ್ಮೆ ತೆರೆಗೆ ಬರಲು ಸಿದ್ಧವಾಗಿದೆ.
ಈ ಚಿತ್ರ ಒಂದಲ್ಲ, ಎರಡಲ್ಲ, 9 ನಂದಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಈಗಿನ ಪೀಳಿಗೆಯ ಪ್ರೇಕ್ಷಕರಿಗೂ ಭೈರವ ದ್ವೀಪಂ ಇಷ್ಟವಾಗುತ್ತದೆ. ಇಂತಹ ಎವರ್ ಗ್ರೀನ್ ಸಿನಿಮಾ ಆಗಸ್ಟ್ ನಲ್ಲಿ ರೀ ರಿಲೀಸ್ ಆಗಲಿದೆ. ಆಗಸ್ಟ್ 5 ರಂದು 4K ಪ್ರಿಂಟ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಇದರಿಂದ ಬಾಲಯ್ಯ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಅಂತೆಯೇ ಮಹೇಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಬ್ಯುಸಿನೆಸ್ ಮ್ಯಾನ್’ ಕೂಡ ರೀ ರಿಲೀಸ್ ಆಗಲಿದೆ. ಮಹೇಶ್ ಅಭಿಮಾನಿಗಳು ಹಾಗೂ ಇತರೆ ನಾಯಕರ ಅಭಿಮಾನಿಗಳು ಈ ಸಿನಿಮಾದ ಮರು ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಯಾಕೆಂದರೆ ಈ ಸಿನಿಮಾದಲ್ಲಿ ಮಹೇಶ್ ಹೇಳುವ ಡೈಲಾಗ್ ಗಳು ಯುವಜನತೆಯಲ್ಲಿ ಒಂದು ರೇಂಜ್ ಕ್ರೇಜ್ ಹುಟ್ಟಿಸಿದೆ. ಮಾಸ್ ಡೈರೆಕ್ಟರ್ ಪೂರಿಜಗನ್ನಾಥ್ ನಿರ್ದೇಶನದ ಈ ಚಿತ್ರ 2012ರ ಸಂಕ್ರಾಂತಿಯಂದು ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಪಡೆಯಿತು.
ಪೋಕಿರಿ ನಂತರ ಮಹೇಶ್ ಮತ್ತು ಪುರಿ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವೂ ಆಗಸ್ಟ್‌ನಲ್ಲಿಯೇ ರೀ-ರಿಲೀಸ್ ಆಗಲಿದೆ. ಆಗಸ್ಟ್ 9 ರಂದು ಮಹೇಶ್ ಹುಟ್ಟುಹಬ್ಬದಂದು ಈ ಚಿತ್ರ ಬಿಡುಗಡೆಯಾಗಲಿದೆ.