ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ನೈತಿಕತೆ ಬಗ್ಗೆ ಮಾತನಾಡದೇ ಇರೋದು ಒಳ್ಳೆಯದು, ಅಧಿಕಾರ ಇವತ್ ಇರತ್ತೆ ನಾಳೆ ಹೋಗತ್ತೆ ಆದರೆ ಮನುಷ್ಯನಿಗೆ ನೈತಿಕತೆ ಮುಖ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ನೈಸ್ ಹಗರಣದ ಬಗ್ಗೆ ಮಾತನಾಡುತ್ತಾ, ಮಾಜಿ ಸಿಎಂ ಬೊಮ್ಮಾಯಿ ಈ ಬಗ್ಗೆ ಸದನ ಸಮಿತಿ ರಚಿಸಿದ್ರು, ಅವರು ಭೂಮಿಯನ್ನು ವಾಪಾಸ್ ಕೊಡಲು ಹೇಳಿದ್ದರು. ಇದು ಸಿದ್ದರಾಮಯ್ಯ ಅವರ ಭೂಮಿಯಲ್ಲಿ, ಜನರ ಭೂಮಿಯನ್ನು ಕೊಡೋದಕ್ಕೆ ಸಿದ್ದರಾಮಯ್ಯಗೆ ಏನು ಕಷ್ಟ ಎಂದು ಪ್ರಶ್ನೆಯಿಟ್ಟಿದ್ದಾರೆ.
ನಮ್ಮ ಪಕ್ಷವನ್ನೇ ಅಳಿಸಿ ಹಾಕುತ್ತೇವೆ ಎನ್ನುವ ಮಾತುಗಳು ಕೇಳಿಬಂದಿವೆ. ಇದೆಲ್ಲಾ ಅಸಾಧ್ಯ ಎಂದು ಹೇಳಿದ್ದಾರೆ.