ಭದ್ರತಾ ದೃಷ್ಟಿಯಿಂದ ನ್ಯೂಯಾರ್ಕ್ ಸೇರಿದಂತೆ ಹಲವು ನಗರಗಳಲ್ಲಿ ಟಿಕ್‌ಟಾಕ್ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭದ್ರತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ನ್ಯೂಯಾರ್ಕ್ ನಗರ ಸೇರಿದಂತೆ ಹಲವಾರು ಯುಎಸ್ ನಗರಗಳಲ್ಲಿ ಸರ್ಕಾರಿ ಸ್ವಾಮ್ಯದ ಸಾಧನಗಳಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಲಾಗಿದೆ. 150 ಮಿಲಿಯನ್‌ಗಿಂತಲೂ ಹೆಚ್ಚು ಅಮೆರಿಕನ್ನರು ಟಿಕ್‌ಟಾಕ್ ಅನ್ನು ಬಳಸುತ್ತಿದ್ದು, ಇದು ಚೀನಾದ ಟೆಕ್ ದೈತ್ಯ ಬೈಟ್‌ಡ್ಯಾನ್ಸ್ ಒಡೆತನದಲ್ಲಿದೆ. ಚೀನೀ ಸರ್ಕಾರದ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿ, ಅಪ್ಲಿಕೇಶನ್‌ನ ಮೇಲೆ ರಾಷ್ಟ್ರವ್ಯಾಪಿ ನಿಷೇಧಕ್ಕಾಗಿ ಯುಎಸ್ ಶಾಸಕಾಂಗಗಳಿಂದ ಒತ್ತಡ ಹೆಚ್ಚುತ್ತಿದೆ. ಸರ್ಕಾರದ ಆದೇಶದ ಹಿನ್ನಲೆ ನ್ಯೂಯಾರ್ಕ್ ಸಿಟಿ ಏಜೆನ್ಸಿಗಳು 30 ದಿನಗಳಲ್ಲಿ ಈ ಅಪ್ಲಿಕೇಶನ್ ಅನ್ನು ತೆಗೆದುಹಾಕಬೇಕಿದೆ.‌

ಸರ್ಕಾರಿ ನೌಕರರು ಇನ್ಮುಂದೆ ನ್ಯೂಯಾರ್ಕ್ ನಗರದ ಒಡೆತನದ ಸಾಧನಗಳು ಮತ್ತು ನೆಟ್‌ವರ್ಕ್‌ಗಳಲ್ಲಿ ಟಿಕ್‌ ಟಾಕ್ ಅಪ್ಲಿಕೇಶನ್‌ ಅನ್ನ ಬಳಸುವಂತಿಲ್ಲ. ನ್ಯೂಯಾರ್ಕ್ ಈಗಾಗಲೇ ಮೊಬೈಲ್ ಸಾಧನಗಳಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಿದೆ. ಟಿಕ್‌ ಟಾಕ್ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ.

2020ರಲ್ಲೇ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್‌ಟಾಕ್‌ನ ಹೊಸ ಡೌನ್‌ಲೋಡ್‌ಗಳನ್ನು ನಿಷೇಧಿಸಲು ಪ್ರಯತ್ನಿಸಿದರು. ಆದರೆ ನ್ಯಾಯಾಲಯವು ನಿಷೇಧವನ್ನು ಜಾರಿಗೆ ತರದಂತೆ ತಡೆಯಿತು. ಅಮೆರಿಕದ ಹಲವಾರು ರಾಜ್ಯಗಳು ಮತ್ತು ನಗರಗಳು ಸರ್ಕಾರಿ ಸಾಧನಗಳಲ್ಲಿ ಟಿಕ್‌ಟಾಕ್ ಅನ್ನು ನಿರ್ಬಂಧಿಸಿವೆ. ಮೊಂಟಾನಾ ಇತ್ತೀಚೆಗೆ ಅಪ್ಲಿಕೇಶನ್ ಅನ್ನು ರಾಜ್ಯಾದ್ಯಂತ ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!