ಸಿಲಿಕಾನ್ ಸಿಟಿಯಲ್ಲಿ ಇಂದು ‘ಕೇಕ್​ ಶೋ’ ಗೌಜಿ: ಇಲ್ಲಿ ಕಾಣಸಿಗುತ್ತೆ ನಿಮಗೆ ಸಂಸತ್ತಿನ ಸೊಬಗಿನಿಂದ ಹಿಡಿದು ಚಂದ್ರಯಾನ ಮಾದರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯಲ್ಲಿ ಇಂದು ಕೇಕ್ ಸಂಭ್ರಮ.. ಇಂದಿನಿಂದ ಜನವರಿ 1ರ ವರೆಗೆ ಯುಬಿ ಸಿಟಿ ಸಮೀಪದ ಸೇಂಟ್​ ಜೋಸೆಫ್ ಶಾಲೆಯ ಮೈದಾನದಲ್ಲಿ ‘ ಕೇಕ್​ ಶೋ’ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿದ ಕೇಕ್ ಶೋ ಆಯೋಜಕ ಜಿ.ಮನೀಶ್ , ಈ ಬಾರಿ ವಿಶೇಷವಾಗಿ ಥಿಂಕ್ ಲೋಕಲ್ – ಆಯಕ್ಟ್ ಗ್ಲೋಬಲ್ ಪರಿಕಲ್ಪನೆಯಲ್ಲಿ ಕೇಕ್ ಪ್ರದರ್ಶನಕ್ಕೆೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ವಿನ್ಯಾಸ ರಚಿಸಲಾಗಿದೆ. ಈ ಬಾರಿಯ ಕ್ರಿಸ್‌ಮಸ್ -ಹೊಸ ವರ್ಷದ ವಿಶ್ವದ ಅತಿದೊಡ್ಡ ಕೇಕ್‌ಗಳಾಗಿ ಗುರುತಿಸಿಕೊಳ್ಳಲಿದೆ ಎಂದರು.

ಕಳೆದ ಆರು ತಿಂಗಳಿನಿಂದ ಕೇಕ್ ತಯಾರಿಕೆಯ ಕೆಲಸಗಳನ್ನು ನಡೆಸಲಾಗಿದೆ. 3ಡಿ ಸಕ್ಕರೆ – ಕೇಕ್ ರಚನೆಯ ಥೀಮ್‌ನಲ್ಲಿ ಒಂದು ಆಕಾರ ನೀಡಲಾಗುತ್ತದೆ. ಸುಮಾರು 16 ಮಂದಿಯ ತಂಡದಿಂದ 23 ಪ್ರಕಾರದ ಕೇಕ್ ತಯಾರಿಸಲಾಗಿದೆ. ಇದಕ್ಕಾಗಿ ಸುಮಾರು 6,062 ಕೆ.ಜಿ.ಗೂ ಹೆಚ್ಚಿನ ಕೇಕ್ – ಸಕ್ಕರೆ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೇಕ್ ಪ್ರದರ್ಶನದಲ್ಲಿ ಸಂಸತ್ತಿನ ಸೊಬಗು, ಕುದುರೆ ಮೇಲೆ ಕುಳಿತ ಶಿವಾಜಿ ಮಹಾರಾಜ, ದಿ ನೇಕೆಡ್ ರೆಡ್ ವೆಲ್ವೆೆಟ್, ಸಕ್ಕರೆ ಶಿಲ್ಪಕಲೆಯಲ್ಲಿ ಚಂದ್ರಯಾನ, ಬದಲಾಗುತ್ತಿರುವ ಡಾಲ್ ಕೇಕ್, ಮೊಸಳೆ, ಬೀಚ್​, ಬಸ್​ ಮಾದರಿ ಸೇರಿದಂತೆ ಹಲವು ರೀತಿಯ ಕೇಕ್‌ಗಳು ಶೋ ನಲ್ಲಿ ಇರಲಿವೆ ಎಂದು ಹೇಳಿದ್ದಾರೆ.

ನಿತ್ಯ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಒಟ್ಟು 18 ದಿನ ಕೇಕ್​ ಶೋ ಇರಲಿದೆ ಎಂದು ಮನೀಶ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!