SHOCKING | ಮಂಗಳೂರಿನಿಂದ ತೈಲ ಹೊತ್ತು ತೆರಳುತ್ತಿದ್ದ ಹಡಗಿನ ಮೇಲೆ ಕ್ಷಿಪಣಿ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರಿನಿಂದ ವೈಮಾನಿಕ ತೈಲ ಹೊತ್ತೊಯ್ಯುತ್ತಿದ್ದ ಹಡಗಿನ ಮೇಲೆ ಕೆಂಪು ಸಮುದ್ರದಲ್ಲಿ ಕಡಲ್ಗಳ್ಳರು ಕ್ಷಿಪಣಿ ದಾಳಿ ನಡೆಸಿದ್ದಾರೆ.
ಕೆಂಪು ಸಮುದ್ರವನ್ನು ಸಂಪರ್ಕಿಸುವ ಬಾಬ್ ಎಲ್-ಮಾಂಡೆಬ್ ಜಲಸಂಧಿಯಲ್ಲಿ ಈ ಘಟನೆ ನಡೆದಿದೆ.

ಈ ಹಡಗು ಖಾಸಗಿ ಇಂಧನ ಪೂರೈಕೆ ಕಂಪನಿಗಾಗಿ ಮಂಗಳೂರಿನ ಎಂಆರ್‌ಪಿಎಲ್ ನಿಂದ ವಿಮಾನಗಳಲ್ಲಿ ಬಳಸುವ ತೈಲ ಹೊತ್ತು ನೆದರ್ಲೆಂಡ್‌ಗೆ ತೆರಳುತ್ತಿತತು. ಈ ನಡುವೆ ದಾಳಿ ನಡೆದಿದೆ. ಆದರೆ ಅದೃಷ್ಟವಶಾತ್ ಕಡಲ್ಗಳ್ಳರ ಗುರಿ ತಪ್ಪಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಬ್ರಿಟನ್ ರಕ್ಷಣಾ ಪಡೆ ಸ್ಪಷ್ಟಪಡಿಸಿದೆ.

ದಾಳಿಯನ್ನು ಗಮನಿಸಿದ ಅಮೆರಿಕದ ಸಮರ ನೌಕೆ ಕ್ಷಿಪಣಿಯನ್ನು ಹೊಡೆದುರುಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!