ಹೊಸದಿಗಂತ, ವರದಿ,ಹಾಸನ :
ಅಂಬಾರಿ ಅರ್ಜುನ ಆನೆ ಸಮಾಧಿ ಬಳಿ ಕಾಡಾನೆಗಳು ದಾಂಧಲೆ ಮಾಡಿವೆ. ಸಮಾಧಿ ಸುತ್ತ ಹಾಕಿದ್ದ ತಂತಿಬೇಲಿಯನ್ನು ನಾಶ ಮಾಡಿ ಕಾಡಾನೆಗಳು ಸಮಾಧಿ ಮೇಲೆಲ್ಲಾ ಓಡಾಡಿವೆ.
ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿದ್ದನು. ಇಲ್ಲಿಯೇ ಅರ್ಜುನನ್ನು ಸಮಾಧಿ ಮಾಡಲಾಗಿದೆ. ನಾಡ ತೋಪಿನಲ್ಲಿರುವ ತಾತ್ಕಾಲಿಕ ಅರ್ಜುನನ ಸಮಾಧಿ ಸುತ್ತ ತಂತಿಬೇಲಿ ಹಾಕಲಾಗಿತ್ತು. ಗುರುವಾರ ರಾತ್ರಿ ಕಾಡಾನೆಗಳ ಹಿಂಡು ತಂತಿ ಬೇಲಿಯನ್ನೇ ನೆಲಸಮಗೊಳಿಸಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
11ನೇ ದಿನದ ಪೂಜೆ..ಕಾರ್ಯ ಮಡಿದ ಸ್ಥಳೀಯರು
ಅರ್ಜುನ ಆನೆ ಮೃತಪಟ್ಟು 11 ದಿನಗಳು ಕಳೆದವು. ಇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಯಸಳೂರು ಸುತ್ತಮುತ್ತಲ ಗ್ರಾಮಸ್ಥರು ಪೂಜೆ ನೆರವೇರಿಸಿದರು. ಸಾರ್ವಜನಿಕರು ಅರ್ಜುನನ ಭಾವಚಿತ್ರವಿಟ್ಟು ಪೂಜೆ ಮಾಡಿದರು. ಈ ವೇಳೆ ಅರ್ಜುನನ್ನು ನೆನೆದು. ಭಾವುಕರಾದರು. ಯಸಳೂರು, ಬಾಳೆಕೆರೆ, ಡಬ್ಬಳ್ಳಿ, ಚಿಕ್ಕದೂರು, ದೊಡ್ಡಕುಂದೂರು ಗ್ರಾಮಸ್ಥರ ಸಮ್ಮುಖದಲ್ಲಿ ಹಾಗೂ ಆದ್ಯಾತ್ಮಚಿಂತಕ ಯಸಳೂರಿನ ನವೀನರಾಧ್ಯ ರವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಯಸಳೂರಿನ ವೀರಶೈವ ಸಮಾಜದ ಅಧ್ಯಕ್ಷರಾದ ಶಿವರಾಜ್ ರವರು ಹಾಗೂ ಅರಣ್ಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು