ಹೊಸದಿಗಂತ, ವರದಿ,ಮಂಡ್ಯ :
ಮಳವಳ್ಳಿ ತಾಲೂಕು ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದ ರಮೇಶ್ ಹಾಗೂ ಮಹೇಶ್ ಎಂಬುವರು ತಮ್ಮ ಜಮೀನಿನಲ್ಲಿ ಬತ್ತ ಬೆಳದಿದ್ದು ಅದನ್ನು ಕಟಾವ್ ಮಾಡಿ ಜಮೀನಿನಲ್ಲಿ ಮಡಗಿದ್ದ ಸ್ಥಳಕ್ಕೆ ಒಂಟಿ ಸಲಗ ಒಂದು ಬಂದು ನಾಶಪಡಿಸಿರುತ್ತದೆ. ಇದರಿಂದ ಸುಮಾರು 25 ಸಾವಿರ ರೂ. ನಷ್ಟ ಸಂಭವಿಸಿರುತ್ತದೆ.
ಮೂಲತಃ ದಳವಾಯಿ ಕೋಡಿಹಳ್ಳಿ ಗ್ರಾಮದ ವಾಸಿ ರಮೇಶ್ ಮಾತನಾಡಿ ನಾವು ಗುರುವಾರ ರಾತ್ರಿ ನಮ್ಮ ಫಸಲನ್ನು ಉಳಿಸಿಕೊಳ್ಳಲು ಕಾಡು ಪ್ರಾಣಿಗಳಾದ ಹಂದಿಯಿಂದ ಕಾವಲು ಕಾಯುತ್ತಿದ್ದೆವು, ಆದರೆ ಕಾಡಾನೆ ಒಂದು ಕಟಾವ್ ಮಾಡಿ ಹಾಕಿದ ಭತ್ತದ ಫಸಲನ್ನು ತುಳಿದು ಹಾಗೂ ಬಾಳೆ ಫಸಲನ್ನು ತುಳಿದು ನಾಶಪಡಿಸಿರುತ್ತದೆ.
ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕಾಡುಪ್ರಾಣಿಗಳಿಂದ ನಾವು ಬೆಳೆದ ಪಸಲನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.