ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ 3 ತಿಂಗಳಲ್ಲಿ ವನ್ಯಜೀವಿ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಬೇಕೆಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇಂದು ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವನ್ಯಜೀವಿ ವಸ್ತು ವಾಪಸ್ ಕೊಡಲು ಕೊನೇ ಅವಕಾಶ ಕೊಡಲು ತೀರ್ಮಾನ ಮಾಡಲಾಗಿದೆ.ಪ್ರಾಣಿ ಅಂಗಾಂಗ ಹಿಂತಿರುಗಿಸಲು 3 ತಿಂಗಳು ಸಮಯ ಕೊಡಲು ತೀರ್ಮಾನ ಆಗಿದೆ. ಕಾನೂನು ಇಲಾಖೆ ಕೂಡಾ ಇದಕ್ಕೆ ಒಪ್ಪಿಗೆ ನೀಡಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಯಾವುದೇ ಅಂಗಾಂಗ ಇದ್ದರೂ ಜನರು ವಾಪಸ್ ಕೊಡಬೇಕು. 1978 ಹಿಂದಿನಿಂದ ಪ್ರಾಣಿ ಅಂಗಾಂಗ ಇರೋರಿಗೆ ಈ ಅವಕಾಶ ಕೊಡಲಾಗಿದೆ. ಅಂಗಾಗ ವಾಪಸ್ ಮಾಡಿದರೆ ಕೇಸ್ ಹಾಕಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.