ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರ್​ಟಿಪಿಸಿಆರ್​​ ಟಸ್ಟ್​​ಗೆ ವಿಟಿಎಮ್ ಕೊರತೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿಯಲ್ಲಿ ಮತ್ತೆ ಕೊರೋನಾ ಭೀತಿ ಶುರುವಾಗಿದ್ದು, ಕೊರೋನಾ ಆರ್ಭಟ ಹೆಚ್ಚಾಗುತ್ತಿದೆ. ಆರ್​ಟಿಪಿಸಿಆರ್​ ಟೆಸ್ಟ್​ನ ವಿಟಿಎಮ್​ ಕಿಟ್​ ಮಾತ್ರ ಬಂದಿಲ್ಲ. ವಿಟಿಎಮ್ ಕಿಟ್​​ಗಳಿಲ್ಲದ ಕಾರಣ ಆರ್​ಟಿಪಿಸಿಆರ್​ ಟೆಸ್ಟಿಂಗ್ ಆರಂಭವಾಗಿಲ್ಲ. ಹಾಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರ್​ಟಿಪಿಸಿಆರ್ ಟೆಸ್ಟ್​ಗೆ ಗಂಟಲು ದ್ರವ ತೆಗೆದು ಬಾಕ್ಸ್ ಉಳಗಡೆ ಇಡುವ ವಿಟಿಎಮ್ ಕೊರತೆ ಉಂಟಾಗಿದೆ.

ಈ ಹಿಂದೆ ಕಳಿಸಿದ್ದ 3 ಸಾವಿರ ವಿಟಿಎಮ್ ಕಿಟ್​ಗಳು ಅವಧಿ ಮುಗಿದ ಕಾರಣ ನಿಷ್ಕ್ರಿಯವಾಗಿದೆ. ಹೊಸ ವಿಟಿಎಮ್​ಗೆ ಸಿಬ್ಬಂದಿಗಳು ಮನವಿ ಮಾಡಿದ್ದು, ಡಿಹೆಚ್ಒ ನಿರ್ಲಕ್ಷ್ಯದಿಂದ ಇನ್ನೂ ವಿಟಿಎಮ್ ಬಂದಿಲ್ಲ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಡಿಹೆಚ್ಒ ಸುನೀಲ್ ಮತ್ತು ಟಿಹೆಚ್ಒ ಸಂಜಯ್​ರಿಂದ ಕೊರೊನಾ ಟೆಸ್ಟಿಂಗ್ ಹಾಗೂ ಆರ್ಟಿಪಿಸಿಆರ್ ಲ್ಯಾಬ್ ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕು ಹಾಗೂ ಏರ್ಪೋಟ್ ಸ್ಯಾಂಪಲ್ ಟೆಸ್ಟಿಂಗ್ ಮಾಡುವ ಲ್ಯಾಬ್​ ಒಳಗಿನ ಯಂತ್ರಗಳು ಹಾಗೂ ಸಿದ್ದೆತಗಳ ಪರಿಶೀಲನೆ ಮಾಡಲಾಗಿದೆ.

ಸರ್ಕಾರದ ಗೈಡ್ ಲೈನ್ಸ್​​ ನಂತರ ಏರ್ಪೋಟ್​ನಲ್ಲಿ ಟೆಸ್ಟಿಂಗ್ ಆರಂಭವಾಗಲಿದೆ. ದೇವನಹಳ್ಳಿಯ ಸರ್ಕಾರಿ‌ ಆಸ್ವತ್ರೆ ಆವರಣದಲ್ಲಿ ಆರ್ಟಿಪಿಸಿಆರ್ ಲ್ಯಾಬ್ ತೆರೆಯಲಾಗಿದ್ದು, ಸಿಬ್ಬಂದಿಯಿಂದ ಟೆಸ್ಟಿಂಗ್ ಬಗ್ಗೆ ಅಧಿಕಾರಿಗಳು ಮಾಹಿತಿ‌ ಪಡೆದುಕೊಂಡಿದ್ದಾರೆ. ಈಗಾಗಲೆ ಜಿಲ್ಲಾಡಳಿತ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಟೆಸ್ಟಿಂಗ್ ಆರಂಭಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!